ಸ್ನೇಹಿತರೇ ಇತ್ತೀಚೆಗೆ ಡಾ// ಸುಧಾಮೂತಿ೯ಯವರ ಯಶಸ್ವಿ ಎಂಬ ಪುಸ್ತಕ ಓದಿದೆ. ಮೇರು ವ್ಯಕ್ತಿತ್ವದ ಸುಧಾರವರ ಅಂತರಾಳದ ಪರಿಪಕ್ವತೆ , ಪ್ರೌಢಿಮೆ, ಅವರು ಕಂಡುಕೊಂಡಿರುವ ಕಾಣ್ಕೆ ದಶ೯ನ ಇಲ್ಲಿ ಪಾತ್ರಗಳ ಮೂಲಕ ಅನಾವರಣಗೊಳ್ಳುತ್ತಾ ಹೋಗುತ್ತದೆ.
ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ನ ಕ್ಯಾಂಪಸ್ನಲ್ಲಿ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾಥಿ೯ಗಳಾಗಿ ರಾಜ್ಯದ ವಿವಿಧ ಭಾಗಗಳಿಂದ ವಿವಿಧ ಸಾಮಾಜಿಕ ಸ್ತರಗಳ ವಿಭಿನ್ನ ಕೌಟುಂಬಿಕ ಪರಿಸರದಲ್ಲಿ ಬೆಳೆದ ವಿದ್ಯಾಥಿ೯ಗಳು ಸಂಶೋಧನೆಯ ಉನ್ನತ ಶಿಕ್ಷಣಕ್ಕಾಗಿ ಬಂದಿಲ್ಲಿ ದಾಖಲಾಗಿ ಒಂದೆಡೆ ಸೇರುತ್ತಾರೆ.
ಆವರೇ ಜಾನಕೀ ಪರಾಂಜಪೆ, ಉತ್ತರ ,ಅರವಿಂದ, ಸುಮಿತ್ರಾ ,ಮಹೇಶ ಹಾಗೂ ಸುಬ್ಬರಾವ್-- ಇವರ ನಡುವೆ ಬಂದು ಹೋಗುವ ಪಾಮಿ, ಸರಳಾ -ಲೇಖಕರೇ ಹೇಳುವಂತೆ ಇವರೆಲ್ಲರ ಬದುಕಿನ ನೋವು-ನಲಿವಿನ , ಆಸೆ-ನಿರಾಸೆಯ ,ಸೋಲು-ಗೆಲುವಿನ , ಯಶಸ್ಸಿನ ಅಪಯಶದ ಕಥೆಯೇ- ಯಶಸ್ವಿ.
ಪ್ರತಿಷ್ಟಿತ ಕುಟುಂಬದಿಂದ ಬಂದ ಉತ್ತರ ಬದುಕಿನ ಎಲ್ಲ ಪ್ರಶ್ನೆಗಳಿಗೆ ತಾನೇ ಉತ್ತರವಾಗುತ್ತಾಳೆ.
ಅವಳ ಸಹನೆಗೆ ಸಮಸ್ಯೆಗಳೇ ಸೋತು ಕೈ ಚೆಲ್ಲುತ್ತವೆ.
ಜಾನಕಿ ವ್ಯಾಸಂಗದಲ್ಲಿ ಸಂಶೋಧನೆಯಲ್ಲಿ ವೖತ್ತಿ ಬದುಕಿನ ಔನ್ನತ್ಯದ ಹಂತ ತಲುಪಿದರೂ ಸಾಂಸಾರಿಕ ಪರಿಪೂಣ೯ತೆಯನ್ನು ಪಡೆಯಲು ವಿಫಲಳಾಗುತ್ತಾಳೆ. ಜಾನಕಿ ಕೈ ಹಿಡಿದ ಮಹೇಶ ಕವಲುದಾರಿಯಲ್ಲಿ ನಿಲ್ಲುತ್ತಾನೆ.
ಅರವಿಂದ -ಸುಮಿತ್ರ ಎಂದೂ ಸಂಧಿಸಲಾರದ ಎರಡು ಸರಳರೇಖೆಗಳಾಗುತ್ತಾರೆ.
ಅರವಿಂದನ ಗುಡ್ಡಗಾಡು ಜನತೆಯ ಅಭಿವೖದ್ಧಿ ಸೇವೆ ವ್ಯಥ೯ಪ್ರಯತ್ನವಾಗುತ್ತದೆ. ಈ ದೆಸೆಯಲ್ಲಿ ಪಾಮಿಯ ಸಹಕಾರ ವಿಧಿಯಾಟದಿಂದ ಅಧ೯ಕ್ಕೇ ನಿಲ್ಲುತ್ತದೆ. ನಂತರ ಅಧಿಕಾರದ ಆಸೆಯಿಂದ ಚುನಾವಣೆಯಲ್ಲಿ ನಿಂತು ಸಚಿವನಾಗುತ್ತಾನೆ. ನಂತರ ದೊಡ್ಡ ಹಗರಣವೊಂದರಲ್ಲಿ ಸಿಲುಕಿ ಜೈಲು ಪಾಲಾಗುವ ಸಂದಭ೯ ಬಂದೊದಗುತ್ತದೆ.
ಶ್ರೀಮಂತ ಮನೆತನದ ಐಷಾರಾಮಿ ಗುಣ ಹೊಂದಿದ ವೀಣನನ್ನು ಮದುವೆಯಾದ ಸುಬ್ಬು ಸಾಂಸಾರಿಕ ಹೊಂದಾಾಣಿಕೆ ಇಲ್ಲದೆ ಆಪ್ತ ಸಹಾಯಕಿ ಸರಳಾ ಸಹವಾಸಕ್ಕೆ ಬಿದ್ದು ಇತ್ತ ಅವಳನ್ನೂ ಮದುವೆಯಾಗದೆ ಒಡೆಯನ ಮನೆತನದ ಆಸ್ತಿ ಆಸೆಗಾಗಿ ವೀಣನೊಡನೆ ಬಾಳಲಾರದೆ ಸರಳಾಗೆ ಮೋಸ ಮಾಡಿದ ಕಾರಣಕ್ಕೆ ಕುಷ್ಠರೋಗಕ್ಕೆ ಬಲಿಯಾಗುತ್ತಾನೆ.
ಮಹೇಶ ಸಾರಾಳ ಸಹವಾಸಕ್ಕೆ ಬಿದ್ದು ಜಾನಕಿ ಸಾಧನೆ ಮುಗಿಯುವವರೆಗೆ ಕಾಯದೆ ಮನೆಗೆ ಕಂದನ ಬೆಳಕು ಬರುವಷ್ಟರಲ್ಲಿ ಜಾನಕಿ ಕೈಗೆ ಸಿಕ್ಕಿಬಿದ್ದು ಶಾಶ್ವತವಾಗಿ ಅವಳಿಂದ ದೂರವಾಗುತ್ತಾನೆ.
ನಿರಾಶೆ ಹತಾಶೆಯ ಜೀವನವನ್ನು ತಳ್ಳುತ್ತಾನೆ.
ಪಾಮಿ ಆಯಸ್ಸು ಅಧ೯ಕ್ಕೇ ಮುಗಿದು ಅರವಿಂದನ ಕನಸು ಸಾಧನೆಗೆ ಮುಳುವಾಗುತ್ತದೆ.
ಹೀಗೆ ಎಲ್ಲರೂ ಬದುಕಿನ ನೂರೆಂಟು ಏರಿಳಿತಗಳ ಮಧ್ಯೆಯೂ ಅಪಾರ ಸಾಧನೆಗೈದು 20 ವಷ೯ಗಳ ನಂತರ ಒಂದೆಡೆ ಸೇರಿ ಆಗಸ್ಟ್ 1 ರಂದು ತಮ್ಮ ತಮ್ಮ ಬದುಕಿನ ಪುನರ್ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಅಷ್ಟರಲ್ಲಿ ಕಾಲ ಬದುಕು ಮಿಂಚಿ ಹೋಗಿರುತ್ತದೆ.
ಒಟ್ಟಿನಲ್ಲಿ ಮನುಷ್ಯ ಏನೇ ಸಾಧಿಸಿದರೂ ಅವನಿಗೆ ಏನಾದರೊಂದು ಅವ್ಯಕ್ತ ಕೊರಗು ಅತೖಪ್ತ ಭಾವ ಬದುಕಿನುದ್ದಕ್ಕೂ ಕಾಡುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ಒಂದು ಕಳೆದು ಕೊಂಡು ಮತ್ತೊಂದನ್ನು ಪಡೆಯಬೇಕು. ಎಲ್ಲ ವಿಷಯಗಳಲ್ಲೂ ಅಂದರೆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಅಸಾಧ್ಯ ಎನ್ನುವುದು ಕಾದಂಬರಿಯ ತಥ್ಯ.
ಎಲ್ಲ ಪಾತ್ರಗಳೂ ಕಳೆದುಕೊಂಡಿದ್ದೂ ಗಳಿಸಿಕೊಂಡಿದ್ದೂ ಎರಡೂ ಇದೆ. ಇದೇ ಜೀವನದ ರೀತಿ.
ಲೇಖಕರು ಸೖಷ್ಟಿಸಿದ ಪಾತ್ರ ಉತ್ತರೆಯ ಮಾತಿನಂತೆ ನಿಸಗ೯ ನಿಯಮ ಇದು.ಸದಾಕಾಲ ಜಯವನ್ನೇ ಗಳಿಸಿದವರು ಗವಿ೯ಗಳಾಗುತ್ತಾರೆ.
ಆಗೊಮ್ಮೆ ಈಗೊಮ್ಮೆ ಸೋಲು ಕಂಡವರು ಹೆಚ್ಚು ವಿವೇಕಯುತರಾಗುತ್ತಾರೆ. ಅದಕ್ಕೆ ಜೀವನದಲ್ಲಿ ಇಂದಿನವರೆಗೆ ಯಾರೂ ಪೂತಿ೯ ಗೆದ್ದಿಲ್ಲ. ಪೂತಿ೯ ಸೋತಿಲ್ಲ.
Life is a Leveller.
ಇದು ಕಾದಂಬರಿಯ ಆಶಯ. ಅಂತೆಯೇ ನನಗನ್ನಿಸಿದ್ದು ನಿರಂತರ ಅನ್ವೇಷಣೆಯೇ ಕನಸುಗಳು. - ಸಾಕಾರತೆಗೆ ಹೋರಾಟವೇ ಬದುಕು.
ಕಾದಂಬರಿ ಸತತ 15 ಮುದ್ರಣಗಳನ್ನು ಕಂಡಿರುವುದು ಪ್ರಾಂಜಲ ಮನಸ್ಸಿನ ಪರಿಪಕ್ವತೆಗೆ ಯಶೋಗಾಥೆಗೆ ಸಾಕ್ಷಿ. ಖಂಡಿತಾ ಒಮ್ಮೆ ಈ ಪುಸ್ತಕ ಓದಿ ಸ್ನೇಹಿತರೇ, ಬದುಕಿನಲ್ಲಿ ಸ್ಥಿತಪ್ರಜ್ಞತೆಯ ಭಾವ ಮೂಡುವುದರಲ್ಲಿ ಸಂಶಯವಿಲ್ಲ.
Sunday, 22 September 2019
ಸುಧಾಮೂತಿ೯ಯವರ ಯಶಸ್ವಿ ಕಾದಂಬರಿ ಕುರಿತು
ಕರುಣಾಳು ಬಾ ಬೆಳಕೆ
ಸ್ನೇಹಿತರೇ, ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಎಂದು ನಮ್ಮಲ್ಲಿನ ಮೂಕ ಆತ೯ನಾದ ಅವ್ಯಕ್ತವಾಗಿ ಕಾಣದ ಅದೖಶ್ಯ ಶಕ್ತಿಯನ್ನು ಸದಾ ಬೇಡುತ್ತಿರುತ್ತದೆ. ನಾನು ಇತ್ತೀಚೆಗೆ ಓದಿದ ಡಾ ಗುರುರಾಜ ಕಜ೯ಗಿಯವರ ಕರುಣಾಳು ಬಾ ಬೆಳಕೆ ಪುಸ್ತಕ ನನ್ನೀ ಮಾತಿಗೆ ಪ್ರೇರಣೆ.
ಪುಸ್ತಕದ ಕುರಿತು ನನ್ನಲ್ಲಿ ಮೂಡಿದ ಅನಿಸಿಕೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.
ಕಥನಕಲೆ ಎನ್ನುವ ಅಪೂವ೯ ವಿದ್ಯೆ ಎಲ್ಲರಿಗೂ ಸಾಧಿತವಲ್ಲ. ಕೆಲವರು ಮಾತ್ರ ಸಿದ್ದಿಸಿಕೊಂಡಿರುತ್ತಾರೆ. ನಾನು ಅನೇಕ ಕಥಾ ಸಂಕಲನಗಳನ್ನು ಕಥಾ ಮಾಲಿಕೆ ಹಾಗೂ ಗುಚ್ಛಗಳನ್ನು ಓದಿದ್ದೇನೆ. ಆದರೆ ಎಲ್ಲದರ ವಸ್ತು ವಿಷಯಗಳು ನಮ್ಮನ್ನು ಸವ೯ಕಾಲಕ್ಕೂ ಹಿಡಿದಿಡುವುದು ಹಾಗೂ ಚಿತ್ತದಲ್ಲಿ ಅಚ್ಚೊತ್ತುವುದು ಕಷ್ಟಸಾಧ್ಯವೇ ಸರಿ.
ಕಜ೯ಗಿಯವರು ಕಥೆ ಹೇಳುವ ರೀತಿ ತಾಯಿ ಮಕ್ಕಳನ್ನು ತಿದ್ದುವ ಪ್ರೀತಿಯೋ , ಗುರುಗಳ ಹಿತನುಡಿಯೋ, ಕಾಂತಾಸಮ್ಮಿತ ಉಪದೇಶವೋ, ಭಕ್ತನಿಗೆ ದೇವರ ಆಣತಿಯೋ ನ್ಯಾಯಾಧೀಶನ ಆಜ್ಞೆಯೋ, ಪರಮಾಪ್ತ ಗೆಳೆತನದ ಸಲಹೆಯೋ,ಪತ್ರಿಕಾ ಸಂಪಾದಕೀಯವೋ ಹೀಗೆ ಯಾವೊಂದೂ ಹಾಗೂ ಏನೆಂದೂ ನಿಣ೯ಯಿಸಲಾಗದು. ಅಂತಹ ಅದ್ಭುತ ಆತ್ಮಸಂವಾದ.
ಫ್ರಜಾವಾಣಿಯ ಅಂಕಣದಲ್ಲಿ ಸದರಿ ಮಾಲಿಕೆ ಪ್ರಕಟವಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಆದರೂ ಈ ಕಥಾ ಸಂಕಲನದಲ್ಲಿ ತಾವು ಶಿಕ್ಷಣ ತಜ್ಞರು ಹಾಗೂ ಸಾಧಕರು ಎಂತಲೂ ಸಹಸ್ರಾರು ವಿದ್ಯಾಥಿ೯ಗಳಿಗೆ ಮಾಗ೯ದಶ೯ಕರೆಂಬ ಹಮ್ಮು-ಬಿಮ್ಮುಗಳಾಗಲೀ , ಒತ್ತಾಯಪೂವ೯ಕ ಆಗ್ರಹವಾಗಲೀ ಕಟ್ಟುನಿಟ್ಟಿನ ನಿಯಮಗಳಲ್ಲಿ ಕಟ್ಟಿಹಾಕುವ ಪ್ರಯತ್ನವಾಗಲೀ ಅವರು ಮಾಡಿಲ್ಲ. ಬದಲಾಗಿ ನಮ್ಮ ಹರಿದಾಡುವ ಮನವನ್ನು ಹಿಡಿದಿಡುತ್ತಾರೆ. ಅವರ ಚಿಂತನೆಯ ವತು೯ಲದ ಸುಳಿಯೊಳಗೆ ನಾವಾಗಿಯೇ ನಮಗರಿವಿಲ್ಲದಂತೆ ಮೌನವಾಗಿ ನಮ್ಮನ್ನು ನಾವು ಕಳೆದುಕೊಂಡು ಲೀನವಾಗಿಬಿಡುತ್ತೇವೆ.
ಸಾಧಿಸಬೇಕೆನ್ನುವವರಿಗೆ ಕಿರುದೀವಿಗೆಯನ್ನು ಹೊತ್ತಿಸಿಕೊಟ್ಟು ಈ ಕತ್ತಲಿನ ಜಗದಲ್ಲಿ ಬೆಳಕಿನ ಮಿಂಚನ್ನು ಹೇಗೆ ಕಂಡುಕೊಳ್ಳಬಹುದೆಂದು ತಿಳಿಸಿ ಉಪಕರಿಸಿದ್ದಾರೆ. ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ಭಾವನಾ ಪ್ರಪಂಚದಲ್ಲಿ ಯಶಸ್ವೀ ಬಾಳ್ವೆಯನ್ನು ಹಾಗೂ ಸಾಥ೯ಕ ಜೀವನವನ್ನು ಹೇಗೆಲ್ಲಾ ನಡೆಸಬಹುದೆಂಬುದನ್ನು ನೂರಾರು ಸುಂದರ ನಿದಶ೯ನಗಳು ಹಾಗೂ ಜ್ವಲಂತ ಸಾಕ್ಷಿಗಳನ್ನು ಒಂದೊಂದಾಗಿ ಅನಾವರಣಗೊಳಿಸುತ್ತಲೇ ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚಿಬಿಡುತ್ತಾರೆ. ಎಂಥ ದಾಶ೯ನಿಕನಾದರೂ , ಮಹಾ ಮಾನವತಾವಾದಿಯೂ, ಸವ೯ಸಂಗ ಪರಿತ್ಯಾಗಿಯೂ ಹೀಗೆ ಯಾರೇ ಆದರೂ ಪರಿಪೂಣ೯ ಪ್ರಜ್ಞಾವಂತರಲ್ಲ /ಸವ೯ಜ್ಞರಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಬದುಕಿನುದ್ದಕ್ಕೂ ಕಲಿಕೆ ನಿರಂತರ . ಇವರು ಹೇಳುವ ಆದಶ೯, ಮೌಲ್ಯ, ಋಜುತ್ವ , ಜೀವನಶ್ರದ್ಧೆ ಯನ್ನು ಮೂಡಿಸಿ, ಜೀವನೋತ್ಸಾಹವನ್ನು ನೂಮ೯ಡಿಗೊಳಿಸುವ ಬದುಕನ್ನು ಕಟ್ಟಿಕೊಳ್ಳಲು ಸ್ಫೂತಿ೯ ನೀಡುವ ಬಗೆ ಅಚ್ಚರಿ ಮೂಡಿಸುತ್ತದೆ.
ನಿಜಕ್ಕೂ ಇದೊಂದು ಅಮೖತದ ಅಕ್ಷಯಪಾತ್ರೆ. ನಮ್ಮಲ್ಲಿನ ದಿವ್ಯ ಅದಮ್ಯ ಚೇತನವನ್ನು ಜಾಗೖತಗೊಳಿಸಿ ಉದ್ದೀಪನಗೊಳಿಸುವ ಸುಂದರ ಸುದೀಘ೯ ಬೆಳಕಿನ ಯಾತ್ರೆ.
ಅವರು ಉದಾಹರಿಸುವ ಪಾತ್ರಗಳು ನಾವೇ / ನಮ್ಮವೇ/ ನಮ್ಮವರ ಮಧ್ಯದಲ್ಲಿಂದ ಮೂಡಿದವೇ.
ಮನಸ್ಸೆಂಬ ಮಾಯಾಕನ್ನಡಿಯಲ್ಲಿ ನಮ್ಮೊಳಗಿನ ಪ್ರತಿಬಿಂಬವನ್ನು ಹೇಗೆ ನಾವು ನಿಚ್ಚಳವಾಗಿ ಅರಿವಿನ ಬೆಳಕಿನೊಂದಿಗೆ ಕಾಣಬಹುದು ಎಂಬುದನ್ನು ಪರಮೋಚ್ಚವಾಗಿ ನಿರೂಪಿಸಿದ್ದಾರೆ. ಪುಸ್ತಕ ಸಿಕ್ಕರೆ ಮರೆಯದೇ ಓದಿ ಮನಸು ಹಗುರಾಗುತ್ತದೆ. ಮೆಲುಕು ಹಾಕುವ ಹೊತ್ತಿಗೆಯದು. ನಿಮ್ಮ ವೈಯಕ್ತಿಕ ಸಂಗ್ರಹದಲ್ಲಿ ಅದರಲ್ಲೂ ನಿಮ್ಮ ಅಂತರಂಗದಲ್ಲೊಂದಿಷ್ಟು ಜಾಗದಲ್ಲಿ ಭದ್ರ ಮಾಡಿಕೊಳ್ಳಿ.
ಇಂತಿ ಶ್ರೀಮತಿ ಭಾರತಿ ರಘು.
ಒಂದು ಗಳಿಗೆ ನಮಗಾಗಿ
ಆತ್ಮೀಯ ಸ್ನೇಹಿತರೇ ಬದುಕಿನ ಯಾಂತ್ರಿಕತೆಯಲ್ಲಿ ಜಂಜಾಟದ ಬದುಕಲೇಬೇಕಾದ ಅನಿವಾಯ೯ತೆಯ ನಡುವೆ ಇವುಗಳ ಹೊರತಾಗಿ ಬದುಕು ನೀರಸ ಎನ್ನಿಸುವ ಹೊತ್ತಿನಲ್ಲಿ ಒಂದಷ್ಟು ಘಳಿಗೆ ನಮಗಾಗಿ ಕೇವಲ ನಮ್ಮ ಕುಟುಂಬಕ್ಕಾಗಿ.
ದಯವಿಟ್ಟು ಹೊರಡಿ ಆಸ್ತಿ ಮಾಡಿಡುವ ಚಿಂತೆ ಕಂತೆಗಳ ತೊರೆದು, ಧ್ಯಾನ-ಭಜನೆಗಳ ಗುಂಗಿನಿಂದ ಹೊರನಡೆದು, ಆಪ್ತರು ನೆಂಟರಿಷ್ಟರ ನಿಷ್ಠೂರಗಳ ದಾಟಿ ಬದುಕು ನಮಗಾಗಿ. ಕೇವಲ ನಮ್ಮ ಸಂತಸಕ್ಕಾಗಿ.
ಹಲವು ಜವಾಬ್ದಾರಿಗಳ ಹೊತ್ತು ಒಂದು ಹಂತ ತಲುಪಿದ ಬದುಕಿಗೆ ಬೇಡವೇ ರಿಲ್ಯಾಕ್ಸ್?
ಬದುಕಿನ ವ್ಯಾಪಕತೆ ಸಂಕೀಣ೯ತೆ ವಾಸ್ತವತೆ ಎಲ್ಲವನ್ನೂ ಏಕಕಾಲಕ್ಕೆ ಕಟ್ಟಿಕೊಡುವ ಪಯಣಕ್ಕೆ/ಪ್ರವಾಸಕ್ಕೆ.
ಹೊರಡಿರಿ ರೋಗಗಳು ನಿಮ್ಮನ್ನು ಮುತ್ತುವ ಮುನ್ನ , ಕೈಕಾಲಲ್ಲಿ ಅಲ್ಪ-ಸ್ವಲ್ಪ ಕಸುವು ಇರುವ ಕಾಲದಲ್ಲೇ, at least ಮೖತ್ಯು ಮುಟ್ಟದ ಮುನ್ನ. I beg u all. This is my humble request. Once again Thank u all.
ಜೀವನ ಸಂಧ್ಯೆ ಮರಳಿ ಅರಳುವ ಸಮಯ.
ಜೀವನ ಸಂಧ್ಯೆಯ ಪ್ರವೇಶ ನೇಪಥ್ಯಕೆ ಸಾಗುವ ದಿನನಿತ್ಯಕೆ ಬೆನ್ನು ಹಾಕಿ ಹಾರುವ ಪಲಾಯನವಲ್ಲ.
ಅದು ನವ ಜೀವನದ ಮರುಹುಟ್ಟು. ಕಳೆದು ಹೋದ ಬಾಳ ನೋವು-ನಲಿವಿನ ಸುಖ-ದುಖಗಳ ಪುನ: ಆವಿಭ೯ವಿಸಿಕೊಂಡು ಸೋತು ಗೆದ್ದ ಜೀವನದ ಸಿಂಹಾವಲೋಕನ ಆತ್ಮಾವಲೋಕನ ಮಾಡುತ್ತಾ ಸ್ವತ: ಅಳೆದು ತೂಗಿಕೊಳ್ಳುವ ಸಮಯ.
ಜೀವನಶ್ರದ್ಧೆ ಮತ್ತು ಜೀವನೋತ್ಸಾಹಗಳನ್ನು ಮತ್ತೊಮ್ಮೆ ಮಗದೊಮ್ಮೆ ಮೈಗೂಡಿಸಿಕೊಳ್ಳುವ ನವ ರಮ್ಯಚೈತ್ರಕಾಲ .
ಏಕೆಂದರೆ ಜೀವನ ಒಂದು ಹಂತಕ್ಕೆ ಬಂದಿರುತ್ತದೆ. ವೈಯುಕ್ತಿಕ ಜವಾಬ್ದಾರಿಗಳು ಮೇರುಹಂತಕ್ಕೆ ಬಂದು ಮಕ್ಕಳು ನೆಲೆಯಾಗಿ ಬಾಳ ಹಾದಿ ಹಾಗೂ ಭವಿತವ್ಯವನ್ನು ಕಟ್ಟಿಕೊಳ್ಳಲು ಹಾತೊರೆಯುತ್ತಿರುತ್ತಾರೆ. ಇಂಥ ಸಮಯದಲ್ಲಿ ಅವರರ ಬೆನ್ನಿಗೆ ನಿಂತು ನೈತಿಕ ಮಾನಸಿಕ ಸ್ಥೈಯ೯ ಹೇಳುತ್ತಾ ಬಾಳನ್ನು ಹಸನುಗೊಳಿಸಿಕೊಳ್ಳಲು ನಯವಾಗಿಯೇ ತಿಳಿಹೇಳುತ್ತಾ ಅವರ ವೈಯುಕ್ತಿಕತೆಗೆ ಅಂಟಿಯೂ ಅಂಟದಂತಿರಬೇಕು.
ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ ಎಂದು ಹಿಮಾಲಯಕ್ಕೋ ಚಾರಾಧಾಮ್ ಯಾತ್ರೆಗೋ ಕಾಣದ ದಿಗಂತಕ್ಕೋ ದೖಷ್ಟಿ ನೆಡುವುದು ತರವಲ್ಲ. ದೇವರು ಕೊಟ್ಟ ಜೀವನ ಬದುಕಿ ಸವೆಸಿ ಸಾಥ೯ಕ ಪಡಿಸಿಕೊಳ್ಳಬೇಕು.
ಭಾಷೆ ಗೊಂದಲ ಬೇಡ
ಭಾಷೆ ಯಾವುದೇ ಆಗಲಿ ಸ್ಥಾನಮಾನಕ್ಕಿಂತ ಮಾನವನ ಸಹ ಬಾಳ್ವೆಗೆ ಕ್ಕೊಳ್ಕೊಡುಗೆಗೆ ಸಾಂಸ್ಕೖತಿಕ ವಿನಿಮಯಕ್ಕೆ ಪರಸ್ಪರ ಸೋದರತ್ವ ಹಾಗೂ ಭಾವೈಕ್ಯತೆಗೆ ಭಾಷೆ ಸಂವಹನ ಮಾಧ್ಯಮವಾಗಬೇಕು. ಅದಾಗಲೇ ಅದು ಪರಿಣಾಮಕಾರಿ.
ಉಡುಗೊರೆ
*ಉಡುಗೊರೆ*💐
**********
ತುಂಬಾ ಬಡತನದಲ್ಲಿ ಬೆಳೆದ ಒಬ್ಬ ಆರ್ಡಿನರಿ ಅಂಚೆ ಕಚೇರಿಯ ಉದ್ಯೋಗಿ ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ ಉದ್ಯೋಗಸ್ಥರನ್ನಾಗಿ ಮಾಡಿ ವಿದೇಶಗಳಲ್ಲಿ ವಾಸ್ತವ್ಯ ಹೂಡುವ ಹಾಗೇ ಮಾಡಿದ.
ಇಬ್ಬರು ಮಕ್ಕಳಿಗೆ ಮದುವೆಯಾಗಿ ಮಕ್ಕಳಾದವು .ಇಬ್ಬರೂ ಸುಖೀ ಸಂಸಾರಸ್ಥರೇ ಆದರೆ ತಂದೆಗೆ ಊರಿಂದೂರಿಗೆ ವರ್ಗಾವಣೆಗಳಾಗುತ್ತಾ ಕೊನೆಗೆ ಆಂದ್ರಪ್ರದೇಶದ ಚಿಂತಲಪಲ್ಲಿ ಎಂಬ ಕಚೇರಿಯಲ್ಲಿ ನಿವೃತ್ತಿ ಸ್ಥಾನಕ್ಕೆ ಬಂದು ನಿಂತರು.
ನಿವೃತ್ತಿಯು ಆಯಿತು, ಈಗ ಅಪ್ಪನಿಗೆ ಚಿಂತೆ.
ಮಕ್ಕಳಿಗೆ ಫೋನಾಯಿಸುತ್ತಾರೆ "ಒಂದೆರಡು ದಿನ ಊರಿಗೆ ಬಂದುಹೋಗಲು ಸಾಧ್ಯವೇ" ಎಂದು.
ಮಕ್ಕಳು ಸಹ ಒಪ್ಪುತ್ತಾರೆ .ಆದರೆ ಮಕ್ಕಳು ಒಂದೆರಡು ದಿನವಲ್ಲದೆ ಒಂದು ತಿಂಗಳು ರಜೆ ಮಾಡಿ ಊರಿಗೆ ಬರುತ್ತಾರೆ.
ಬಂದ ಮಕ್ಕಳಿಗೆ ತಂದೆ ಹೇಳುತ್ತಾರೆ "ನಿಮಗೊಂದು ವಿಷಯ ತಿಳಿಸಬೇಕಿದೆ "ಎಂದು.
"ನನ್ನ ನಿವೃತ್ತಿಯಾಗಿದೆ ಹಾಗೆಯೇ ನನ್ನ ಖಾತೆಗೆ ಒಂದಷ್ಟು ಲಕ್ಷ ಪಿ ಎಫ್ ಹಣವು ಬಂದಿದೆ ನೀವಿಬ್ಬರು ಆ ಹಣವನ್ನು ಹಂಚಿಕೊಂಡರೆ ನಾನು ನನ್ನ ಪೆನ್ಶನ್ ಹಣದಲ್ಲಿ ನಿಮ್ಮ ತಾಯಿಯನ್ನು ಸಾಕಬಲ್ಲೆ ಈ ಸುದ್ದಿ ಹೇಳಲಿಕ್ಕೆಂದೇ ನಿಮ್ಮನ್ನು ಕರೆಸಿದೆ ಎಂದು ಮತ್ತೆ ಒಂದೆರಡು ದಿನ ಒಟ್ಟಿಗೆ ಎಲ್ಲರೂ ಎಲ್ಲಾದರೂ ಸುತ್ತಿ ಬರೋಣವೆಂದು" ಇಚ್ಛೆ ವ್ಯಕ್ತಪಡಿಸುತ್ತಾರೆ
ಅದಕ್ಕೆ ಮಕ್ಕಳು ಹೇಳುತ್ತಾರೆ
"ಮೊದಲು ಸಲ ಕೆಲಸ ಮಾಡಿದ ಅಂಚೆ ಕಚೇರಿಯಾದ ಉಡುಪಿಯ ಹಿತ್ತಲುಮನೆ ಎಂಬ ಗ್ರಾಮಕ್ಕೆ ಹೋಗಿ ಬರೋಣ"ಎಂದು ಹೇಳುತ್ತಾರೆ,
ತಂದೆಗೆ ಆಶ್ಚರ್ಯ ಆ ಗ್ರಾಮದ್ಲಲೇನಿದೆ ಎಂದು ಆದರೂ ಮಕ್ಕಳಿಗೆ ನಿರಾಸೆಗೊಳಿಸದೆ ಹೊರಟುನಿಲ್ಲುತ್ತಾರೆ.
ಆ ಗ್ರಾಮದಲ್ಲಿ ಮೊದಲು ಕೆಲಸ ಮಾಡುವ ಸಮಯದಲ್ಲಿ ವಾಸ್ತವ್ಯ ಹೂಡಿದ್ದ ಗುಡಿಸಲು ಚೊಕ್ಕವಾದ ಮನೆ. ತನ್ನ ಮಕ್ಕಳು ಆಟವಾಡಿದ್ದ ಅಂಗಳ ಹಸಿರುಮಯವಾಗಿದೆ ಆಗ ನೆಟ್ಟ ಸಸಿಗಳು ಮರಗಳಾಗಿವೆ ತೆಂಗಿನ ಮರ ತುಂಬಾ ಕಾಯಿಗಳಿವೆ ಎತ್ತ ನೋಡಿದರು ಹಸಿರು ಮನೆಯ ಕಂಪೌಂಡಿನ ಒಳಗೆ ಪರಿಶುದ್ಧ ತುಳಸಿ ಗಿಡ ಗೇಟು ಪ್ರವೇಶಿಸುವಷ್ಟರಲ್ಲಿ ಒಬ್ಬ ಆಳು ಬಂದು ಗೇಟಿನ ಬೀಗದ ಕೀಲಿ
ಮಗನ ಕೈ ಗೆ ಇಡುತ್ತಾನೆ ಮಗ ಬೀಗ ತೆಗೆದು ಒಳ ಬಂದಾಗ ತಂದೆಗೆ ಎಲ್ಲವೂ ಅಯೋಮಯ ಈ ಆಳು ಯಾರು, ಈ ಮನೆಗೆ ಏಕೆ ಬಂದೆವು, ಎಲ್ಲವೂ ನಿಗೂಢವೇ...
ಮನೆಯ ಒಳಗೆ ಬರುವಷ್ಟರಲ್ಲಿ ಎಲ್ಲವೂ ಸ್ವಚ್ಛಂದ ಸ್ವಚ್ಛಂದ...
ತಂದೆ ಏನೋ ಕೇಳಲು ಬರುವಷ್ಟರಲ್ಲಿ ಮಕ್ಕಳೇ ಮಾತನಾಡಲು ಶುರು ಮಾಡುತ್ತಾರೆ "ಅಪ್ಪ.... ನಿಮ್ಮ ನಿವೃತ್ತಿ ಹತ್ತಿರವಿದೆಯೆಂದು ತಿಳಿಯಿತು .ಈ ಸ್ಥಳ ನಿಮಗೆ ತುಂಬಾ ಇಷ್ಟವೆಂದು ಒಂದು ವರ್ಷದ ಹಿಂದೆ ಈ ಸ್ಥಳವನ್ನು ನಾವೇ ಕೊಂಡುಕೊಂಡಿದ್ದೇವೆ ವರ್ಗಾವಣೆಗಳಿಂದ ಬಸವಳಿದಿದ್ದೀರಿ ಸಾಕು ನಿಮ್ಮ ನೆಮ್ಮದಿಗೆ ಒಂದು ಮನೆ ಇರಬೇಕು ಎಂದು ನಿಮಗೆ ತಿಳಿಸದೆ ನಾವಿಬ್ಬರು ಬಂದು ಇಲ್ಲಿ ಎಲ್ಲವೂ ಸರಿಪಡಿಸಿ ಹೋದೆವು ನಿಮ್ಮ
ಪಿ ಎಫ್ ಹಣ ಖಾತೆಯಲ್ಲೇ ಇರಲಿ ನಮ್ಮನ್ನು ಬಡತನದಲ್ಲಿ ಓದಿಸಿದಿರಿ ,ಬೆಳೆಸಿದಿರಿ ನಾವು ಈಗ ಸದೃಢರಾಗಿದ್ದೇವೆ .ನಮ್ಮ ಮಕ್ಕಳನ್ನು ನಿಮ್ಮಲ್ಲಿಯೇ ಬಿಟ್ಟು ಹೋಗುತ್ತೇವೆ. ಅವರು ನಿಮ್ಮ ಅಡಿಯಲ್ಲಿ ಬೆಳೆದರೆ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಅವರಿಗೂ ತಿಳಿಯುತ್ತದೆ.
ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ .ಮೊಮ್ಮಕ್ಕಳನ್ನು ಓದಿಸಿ ಕೆಲಸಕ್ಕೆಂದು ಆಳು ಇದ್ದಾನೆ ಪ್ರತಿ ತಿಂಗಳು ಅವನ ಸಂಬಳವನ್ನು ಅವನ ಖಾತೆಗೆ ತುಂಬುತ್ತೇವೆ .ನಮ್ಮ ಮನೆಯ ಪಕ್ಕದಲ್ಲೇ ಅವನಿಗೂ ವಾಸ್ತವ್ಯವಿದೆ ವರ್ಷಕ್ಕೊಮ್ಮೆ ತಪ್ಪದೆ ಬಂದುಹೋಗುತ್ತೇವೆ. ಎಂದು ಹೇಳುವಷ್ಟರಲ್ಲಿ
ಅಪ್ಪನ ಕಣ್ಣಾಲಿಗಳು ತುಂಬಿ, ಮೂಕಪ್ರೇಕ್ಷಕರಾಗಿ
ಬಿಟ್ಟರು
*ಮಕ್ಕಳೆಂದರೆ....*☝🏻.
ಕನ್ನಡ ಸಂಪದದ ಬಗ್ಗೆ ನಾಲ್ಕು ಮಾತು
ಕನ್ನಡ ಸಂಪದ ಅಂಕಣ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂವೇದನೆ ಸೖಜನಶೀಲ ವ್ಯಕ್ತಿತ್ವ ಹಾಗೂ ಕ್ರಿಯಾತ್ಮಕ ಮನೋಭಾವ ಹಾಗೂ ಶೀಘ್ರ ಸಂವಹನ - ಸಹಸ್ಪಂದನಕ್ಕಾಗಿ ಒಡಮೂಡಿರುವ ಶ್ರೀ ತಿರು ಶ್ರೀಧರ್ ರವರ ಪ್ರಾಮಾಣಿಕ ಪ್ರಯತ್ನದ ಫಲಶೖತಿ.
ಕಲೆ ಸಾಹಿತ್ಯ ಸಂಗೀತ ಸಂಸ್ಕ್ಕೖತಿ ರಂಗಭೂಮು ನಾಟಕ ಚಲನಚಿತ್ರ ನಾಡಿಗೆ ಅವಿರತ ಸೇವೆ ಸಲ್ಲಿಸಿದ ಅವಿಸ್ಮರಣೀಯರನ್ನು ಹಾಗೂ ಕೆಲವೊಮ್ಮೆ ಪ್ರಾತ:ಸ್ಮರಣೀಯರನ್ನು ಗ್ರಾಂಥಿಕ ರೂಪದಲ್ಲಿ ಅಡಗಿ ಹುದುಗಿಹೋದ ಮಹನೀಯರನ್ನು ಸಮಾಜದ ಮುಖ್ಯಭೂಮಿಕೆಗೆ ಈಗಿನ ಜಾಗತೀಕರಣದ ತಾಂತ್ರಿಕ / ಯಾಂತ್ರಿಕ ಜಗತ್ತಿಗೆ ಅಡಿಯಾಳಾದ ಮನಸಿನ ಸ್ಮೖತಿಪಟಲದಲ್ಲಿ ಮತ್ತೆ ತರುವ ಸ್ಮರಣಿಕೆ ಹಾಗೂ ಜ್ಞಾಪಿಸಿಕೊಳ್ಳುವ ಧೀಮಂತ ಪ್ರಯತ್ನ.
ಇಂದು ದುಡ್ಡಿನ ಹಿಂದೆ ನಾಗಾಲೋಟದಲ್ಲಿರುವ ಯಾರಿಗೂ ಭವ್ಯ ಇತಿಹಾಸವನ್ನು ಕೆದಕಿ ಬೆದಕಿ ನೋಡುವ ಪಾರಂಪರಿಕ ಚರಿತ್ರೆಯನ್ನು ಸಿಂಹಾವಲೋಕನ ಮಾಡುವ ಪ್ರಬುಧ್ಧತೆಯಾಗಲೀ ಮನಸ್ಥಿತಿಯಾಗಲೀ ಇಲ್ಲ. ಇಂತಹ ಸಂದಭ೯ದಲ್ಲಿ ಅಂತಹವರ ಕೈಯಲ್ಲೇ ಇರುವ ಸುಲಭ ಸಾಧನವಾದ ಸಂಚಾರೀ ದೂರವಾಣಿಯೆಂಬ ಮಾಯಾಯಂತ್ರದಲ್ಲಿ ಕೆಲ ಕ್ಷಣಗಳಾದರೂ ಅವನ ಮನಸ್ಸನ್ನು ಹಿಡಿದಿಡುವ ಅದ್ಭುತ ಕೆಲಸ ರೋಬೋಟ್ ರೀತಿಯಲ್ಲಿಯೇ ಸೆಳೆಯುವ ಮಾಯಾಜಾಲ ಕನ್ನಡ ಸಂಪದದ್ದು. ಅರಿಯುವ ಮನಸ್ಸು ಸ್ಪಂದಿಸುವ ವೇಳೆ ನಮಗಿದ್ದರೆ ಸಾಕು. ಅದು ಸಮಗ್ರ ಮಾಹಿತಿ ಕಣಜ. ಅರಿವಿನ ವಿಸ್ತಾರದ ಹೊಸಲೋಕವನ್ನೇ ನಮ್ಮುಂದೆ ತೆರೆದಿಡುತ್ತಿದೆ ಕನ್ನಡ ಸಂಪದ. ಬಳಸಿಕೊಳ್ಳುವ ಜಾಣ್ಮೆ ನಮ್ಮಲ್ಲಿದ್ದರೆ ಸಾಕು.