Sunday, 22 September 2019

ಮಕ್ಕಳಲ್ಲಿ ತಮ್ಮ ಮುಂದಿನ ಗುರಿ ಸ್ಪಷ್ಟವಾಗಿರಲಿ

ಸ್ನೇಹಿತರೇ ಸುದ್ದಿ ಮಾಧ್ಯಮವೊಂದರಲ್ಲಿ ಮಕ್ಕಳನ್ನು ವೈದ್ಯರನ್ನಾಗಿ ಮಾಡುವ ಕನಸು ಕಂಡು  ಮೆಡಿಕಲ್ ಸೀಟ್ ಗಾಗಿ ಯಾವುದೋ ಕಂಪನಿಯೊಂದನ್ನು ನಂಬಿ  ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡ ಸುದ್ದಿ  ನೋಡಿ - ಕೇಳಿ ಒಂದು ಕ್ಷಣ ಭಯಗೊಂಡೆ. ಬೇಸರದಿಂದ ಮನಸ್ಸು ವಿಚಲಿತವಾಯಿತು.
              ಪ್ರಿಯ  ಪಾಲಕ ಪೋಷಕ ಬಂಧುಗಳೇ  ನಿಮಗೇಕೀ ಹುಂಬತನ? ಹುಚ್ಚು ಆಸೆಬುರುಕತನ ವಿಪರೀತ ದೂರಾಲೋಚನೆ ನನಗಂತೂ ಅಥ೯ವಾಗದ ವಿಷಯ.
              ನಿಮ್ಮ ಮಕ್ಕಳಲ್ಲಿ ನಿಮಗೆ ನಂಬಿಕೆಯಿಲ್ಲವೇ? ಅವರ  ಭೌದ್ಧಿಕ ಸಾಮಥ್ಯ೯ ಅಳೆಯುವಲ್ಲಿ ನಿಮ್ಮ ಲೆಕ್ಕಾಚಾರ ತಪ್ಪಾಯಿತೇ?  ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಒಂದು ಹಂತಕ್ಕಾಗಲೇ ನಿಮ್ಮ  ಮಕ್ಕಳ  ಶಿಕ್ಷಣಮಟ್ಟ  ಅವರ ಯೋಚನಾ ಲಹರಿ ವಿಚಾರ ಮಂಡನೆ  ಮುಂದಿನ  ಭವಿಷ್ಯದ ಬದುಕನ್ನು  ಕರಾರುವಾಕ್ಕಾಗಿ ಇದಮಿತ್ಥಂ  ಎಂದು ಆಲೋಚಿಸಿ ರೂಪಿಸಿಕೊಳ್ಳುವ ಚೈತನ್ಯ  ಅವರಲ್ಲಿಯೇ ಸ್ವತ:  ಮೂಡಿರುತ್ತದೆಯಲ್ಲವೇ? 
              ಇಂತಹ ಪರಿಸ್ಥಿತಿಯಲ್ಲಿ  ಅವರ ಬಹುಪಾಲು ನಿಧಾ೯ರವನ್ನು ನಾವು ತೀಮಾ೯ನಿಸುವುದೆಷ್ಟರ ಮಟ್ಟಿಗೆ ಸರಿ? 
                   ಪೂವಾ೯ಗ್ರಹಪೀಡಿತರಾಗಿ ಭ್ರಮೆಯಿಂದ  ಚಿಂತನೆಗೊಳಪಟ್ಟು ಮೆಡಿಕಲ್ ಇಂಜಿನಿಯರಿಂಗ್ ಸೀಟ್ ಗಳ ಲಭ್ಯತೆಗಾಗಿ ಪೇಮೆಂಟ್ ಸೀಟಿಗಾಗಿ  ಮುಂದಾಗಿ ದುಂಬಾಲು ಬೀಳುವುದೇಕೆ? ಕೂಡಿಟ್ಟ ಆರ್ಕಾಸು - ಮೂಕಾ೯ಸುಗಳನ್ನು   ಯಾರಿಗೋ ತೆತ್ತು  ವಾಮ ಮಾಗ೯ಗಳನ್ನು ಅನುಸರಿಸಿಯಾದರೂ ಅನುಸರಿಸಿ  ಡಾಕ್ಟರು ಇಂಜಿನಿಯರುಗಳಾಗಲಿ ಎಂಬ ಧೂತ೯ ವ್ಥಥ೯ ಆಲೋಚನೆಗಳೇಕೆ  ನನಗೆ ಅರಿಯದ ವಿಚಾರ.
              ಇಂದಿನ ಯುಗದಲ್ಲಿ ಶೈಕ್ಷಣಿಕವಾಗಿ  ಸಾಧಿಸಲು  ಅನೇಕ ಮುಕ್ತ  ಮಾಗ೯ಗಳಿವೆ.  ಇಂದಿನ ಪೈಪೋಟಿಯುಕ್ತ  ಜಗತ್ತಿನಲ್ಲಿ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಲು ಮಕ್ಕಳನ್ನು ಅಣಿಗೊಳಿಸಿ. ಅದಕ್ಕೆ ತಕ್ಕಂತೆ ಅವರ ಶೈಕ್ಷಣಿಕ ಚಟುವಟಿಕೆಯನ್ನು ವಿನ್ಯಾಸಗೊಳಿಸಿ.  ನುರಿತ  ತಜ್ಞರಿಂದ ಸೂಕ್ತ ಮಾಗ೯ದಶ೯ನ ತರಬೇತಿ ಕೊಡಿಸಿ.
ಶ್ರದ್ಧೆಯಿಂದ ಶ್ರಮವಹಿಸಿ  ವ್ಯಾಸಂಗ ಮಾಡುವಂತೆ ತಿಳಿಕೇಳಿ.
               ಅಂತೆಯೇ ನಿಮ್ಮ ಆಥಿ೯ಕ  ನೆಲೆಗಟ್ಟಿನ ಇತಿಮಿತಿಗಳ ಪರಿಮಿತಿಗಳನ್ನು ನಯವಾಗಿ ತಿಳಿಸಿ ಇಷ್ಟೇ ನಮ್ಮ  ಪೂರಕ ಒತ್ತು ಸಾಧ್ಯತೆ ಬೇರೆ ನಿವಾ೯ಹವಿಲ್ಲವೆಂದು  ಮಕ್ಕಳಿಗೆ ಮನಗಾಣಿಸಿ. ಅಥ೯ಮಾಡಿಸಿ.
                ಅದನ್ನು ಬಿಟ್ಟು ನಾನು ಹೇಗಾದರೂ ಮಾಡಿ  ವೈದ್ಯಕೀಯ  ಇತ್ಾದಿ ಕೋಸಿ೯ಗೆ  ಪೇಮೆಂಟ್ ಸೀಟು  ಕೊಡಿಸಿಯೇ ತೀರುತ್ತೇನೆಂದು  ಅವರಲ್ಲಿ ಪೊಳ್ಳು ಆಶ್ವಾಸನೆ ನೀಡಿ ಎಲ್ಲೆಲ್ಲೋ  ಅಪರಿಚಿತರೊಂದಿಗೆ ವ್ಯವಹರಿಸಿ ಬಂಡವಾಳ ಹೂಡಿ ಕಳೆದು ಕೊಳ್ಳುವ  ದುರಾಲೋಚನೆಯೇಕೆ? ನಾ ಗೆಲ್ಲಬಲ್ಲೆನೆಂಬ ಭರವಸೆಯ ಬೆಳಕನ್ನು ಅವರಲ್ಲಿ  ಮೂಡಿಸಿದರೆ ಅವರಿಗೆ ಕಿಂಚಿತ್ತಾದರೂ ವಸ್ತುಸ್ಥಿತಿಯ ಅರಿವಾಗೀತು.  ಕನಿಷ್ಟ ಪಕ್ಷ ನಾ ಎಲ್ಲಿ ಯಾವ ಮಟ್ಟದಲ್ಲಿದ್ದೇನೆ ನಾನು ಹೇಗೆ ಅಣಿಗೊಳ್ಳಬೇಕು ಎಂಬ ಜಾಗೖತಿಯ ಅರಿವಾದರೂ ಮೂಡಲು ಸಾಧ್ಯ. ಏನಂತೀರಾ?

ದಶ೯ನ್ ಅಭಿನಯದ ಪೌರಾಣಿಕ ಚಿತ್ತ ಕುರುಕ್ಷೇತ್ರ ಕುರಿತು.

ಕನ್ನಡ ಸಿನಿಮಾ ಎಂಬ ಯಾವ ಮುಲಾಜು ನಿಕೖಷ್ಟ ಕನಿಷ್ಠ ಭಾವನೆಯೇ  ಬರಗೊಡದೆ  ಧೇಶ ಭಾಷೆ ಜಾತಿ ಗಡಿಗಳ  ಎಲ್ಲೆ ಮೀರಿ ಅಬಾಲವೖದ್ಧರಾದಿಯಾಗಿ  ಸವ೯ರನ್ನೂ ಮುದಗೊಳಿಸುವ ಅಸೀಮ ದೖಶ್ಯ ವೈಭವಗಳ ಸರಮಾಲೆ  ಕುರುಕ್ಷೇತ್ರ ಸಿನಿಮಾ. 
             ದಶ೯ನ್ ಅಭಿಮಾನಿಗಳಿಗೆ ರಸದೌತಣ. ಈ ಪೌರಾಣಿಕ ಸಿನಿಮಾ ನಿಜಕ್ಕೂ  ಅಪೂವ೯ ದೖಶ್ಯ ಕಾವ್ಯ.
ದಶ೯ನ್ ರ ವಿರಾಟ್  ನಟನಾ ದಶ೯ನ  ಶ್ರೀಮದ್ ಗಾಂಭೀಯ೯ / ಪೊಗರು -ತಿಮಿರುಗಳು -ಗತ್ತು -ಗೈರತ್ತುಗಳು  ಮೇರೆಮೀರಿ ಕಳೆಗಟ್ಟಿದೆ.

ಸುಯೋಧನನ ಅಬ್ಬರದಲ್ಲಿ ಧಮ೯ಬೀರುಗಳಾದ
ಪಾಂಡವರು ಮಂಕಾಗಿದ್ದಾರೆ.  ಅಜು೯ನನ ಪಾತ್ರಕ್ಕೆ  ಮಕ್ಕಷ್ಟು  ವೀರೋಚಿತತೆ ಧೀರೋದಾತ್ತ ಗುಣಗಳ ಪ್ರದಶ೯ನಕ್ಕೆ ಅವಕಾಶವಿರಬೇಕಿತ್ತು. ಭೀಮನ ವೀರಾವೇಷವೊಂದೇ ದುಯೋ೯ಧನನಿಗೆ ಸರಿಸಾಟಿಯಾಗಿ ಸಾಥ್ ನೀಡಿದೆ. ಏಕೆಂದರೆ ನೇರ ಹಣಾಹಣಿ ಎದುರಾಗುವ ಕಾರಣದಿಂದಿರಬಹುದು. ಅಗ್ರಜನೆಂಬ ಕಾರಣಕ್ಕೆ ಶಶಿಕುಮಾರ್ ಧಮ೯ರಾಯನಾಗಿ  ಸಂದಭೋ೯ಚಿತ ಹಾಗೂ ಸಮಯೋಚಿತ ನುಡಿಮುತ್ತುಗಳನ್ನಾಡಿ ಮಿಂಚುತ್ತಾರೆ.
ಬಹುಪತಿತ್ವ  ಹಾಗೂ  ಪತ್ನಿತ್ವ ದ  /  ಕಣ೯ನ ಹುಟ್ಟಿನ  ಜನ್ಮಜಾತ  ಹಿನ್ನೆಲೆಗಳ ವಿಸ್ತೖತ ಚಚೆ೯ ಕೌರವನ ಮಾತಿನಲ್ಲಿ ಅತಿಯಾಗಿ ಹೊರಹೊಮ್ಮಿದೆ.
        ಅಂಗರಾಜ್ಯಾಧಿಪತಿಯಾಗಿ ಕಣ೯ನ ನೇಮಕ ಕೇವಲ ಮಾತಿನಲ್ಲಿ ನಡೆದು ಹೋಗುತ್ತದೆ. ಅನಾವರಣವಾಗುವುದಿಲ್ಲ.
         ಇದೆಲ್ಲಕ್ಕಿಂತ ಕಣ೯-ಸುಯೋಧನರ  ಪರಮಾಪ್ತ ಸ್ನೇಹಕ್ಕೆ  ದ್ಯೋತಕವಾದ ಕಣ೯-ಭಾನುಮತಿಯರ ಪಗಡೆಯಾಟದಲ್ಲಿ ಸೋತ ಭಾನುಮತಿಯ ಮುತ್ತಿನಸರವನ್ನು ಕತ್ತಿನಿಂದ ಕಿತ್ತು ಎಳೆಯುವಾಗ  ದಿಢೀರನೆ ಬರುವ  ಸುಯೋಥನ  ಕೆಳಗೆ  ಬಿದ್ದ ಮುತ್ತುಗಳನ್ನು ಆಯ್ದುಕೊಡಲೇ ಎಂಬ ನಿವಾ೯ಜ  ಪವಿತ್ರ  ಸ್ನೇಹದ  ನುಡಿಗಳನ್ನಾಡುತ್ತಾನೆ. ಅವನಲ್ಲಿ ಪತ್ನಿ ಹಾಗೂ ಗೆಳೆಯನ  ಒಡನಾಟದಲ್ಲಿ  ಅನುಮಾನದ ಎಳೆ  ಕಿಂಚಿತ್ತೂ ಇರುವುದಿಲ್ಲ. ಈ  ದೖಷ್ಯವನ್ನೇಕೋ ನಿದೇ೯ಶಕರು  ಚಿತ್ರಿಸಿ ಬಿಂಬಿಸಲು ಮರೆತಿದ್ದಾರೆ.ಅಭಿಮಾನಧನ ಸುಯೋಧನನ ಮೇರುಗುಣಗಳಲ್ಲಿ ಇದೂ ಒಂದು.
        ಶ್ರೀಕೖಷ್ಣನ ಪಾತ್ರದಲ್ಲಿ ಹೇಳಬೇಕಾದ  ಇಂಚಿಂಚು ಅಂಶವೂ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ.
ಸುಯೋಧನನ ಪಾತ್ರವನ್ನು ನಿವ೯ಹಿಸಿರುವ ದಶ೯ನ್ ನಟನೆಯ  ಈ  ಸಿನಿಮಾ  ಮಹತ್ತ್ರ ಮೈಲುಗಲ್ಲು. ಮಹತ್ಕೖತಿ. ಸಂಗೊಳ್ಳಿರಾಯಣ್ಣನಾಗಿ ವಿನೀತ ವೀರ ಇಲ್ಲಿ ರಾಜಗಂಭೀರ ಗಧಾಧರ. ದೖಷ್ಟಿಯಾಗುವ ಹಾಗೆ ತೆರೆ ತುಂಬಾ ವಿಜೖಂಭಿಸುತ್ತಾರೆ. ಅವರನ್ನು ವೀರಲಕ್ಷ್ಮಿ ವಿಜಯಲಕ್ಷ್ಮಿ ಯಶೋಲಕ್ಷ್ಮಿಯರು ಅಪ್ಪಿ ಮನಸಾರೆ ಕೖಪಾದೖಷ್ಟಿ ಹರಿಸಿದ್ದಾರೆ.
         ಧಮ೯ವು ಆಚಂದ್ರಾಕ೯.  ಧಮ೯ ಸಂಸ್ಥಾಪನೆಗಾಗಿ ಪ್ರತೀ ಯುಗದಲ್ಲೂ ಅವತರಿಸುತ್ತೇನೆಂದು ಶ್ರೀಕೖಷ್ಣ ತಿಳಿಸಿದ್ದರೂ ಕುರುಕ್ಷೇತ್ರದ  ಮರುಹುಟ್ಟು  ಎಲ್ಲೆಡೆ ಕಂಡೂ ಕಾಣದಂತೆ ಮೇಳೈಸುತ್ತಿರುತ್ತದೆ.
  ಕುರುಕ್ಷೇತ್ರಯುದ್ಧದ ರಣಾಂಗಣ ಅಕ್ಷೌಹಿಣೀ ಸೇನೆ ರಥ ತುರಗ  ಗಜ ಪದಾತಿಗಳ  ಪರಿಕಲ್ಪನೆಯನ್ನು  ಅಭೂತಪೂವ೯ವಾಗಿ ಚಿತ್ರಿಸಿದ್ದಾರೆ.  ಕನ್ನಡಸಿನಿಮಾವನ್ನು ಇದು ಶ್ರೀಮಂತವಾಗಿಸಿದೆ.
ಹಾಡುಗಳು ಇಂಪು ಹಾಗೂ ಕಣಾ೯ನಂದ.
ದುಯೋ೯ಧನನೆಂಬ ಸುಯೋಧನ ಕಡೆಗೆ  ವೀರಸ್ವಗ೯ ವನ್ನು ಹೊಕ್ಕು ಪ್ರಾಣಸ್ನೇಹಿತ ಕಣ೯ನನ್ನಾಲಂಗಿಸುತ್ತಾನೆ. ಅಭಿಮಾನಧನರಾದ  ಪ್ರತಿ ಕನ್ನಡಿಗರು ನೋಡಲೇಬೇಕಾದ  ಅತ್ಯದ್ಭುತ ಪೌರಾಣಿಕ ಚಿತ್ರ. ನಿಮಾ೯ಪಕರು / ನಿದೇ೯ಶಕರು/ನಟರು ತಂತ್ರಜ್ಞರ / ಹಿನ್ನೆಲೆಗಾಯಕರ / ಡಬ್ಬಿಂಗ್ ಕಲಾವಿದರ /ಸಂಕಲನಕಾರರ - ಹೀಗೆ ಬಹುತೇಕರು ಹಾಡ್೯ವಕ್೯/ ಟೀಂ ವಕ್೯ ಮಾಡಿ ಪ್ರೇಕ್ಷಕ ಮಹಾಪ್ರಭುವಿಗೆ ಕೊಡಮಾಡಿರುವ ಅಪೂವ೯ ಕೊಡುಗೆ.

ಆಡುಭಾಷೆಯ ಕಸಿವಿಸಿ

ಸ್ನೇಹಿತರೇ ಕನ್ನಡ ಭಾಷೆಯ ಆಡುಮಾತಿನ ಬಳಕೆ  ಕೆಲವರಿಂದ ಎಷ್ಟು ಆಭಾಸವನ್ನುಉಂಟು ಮಾಡುತ್ತದೆ ಎಂದರೆ ಇತ್ತೀಚಿನ ಘಟನೆಯೊಂದು ನನಗೆ ಘಾಸಿಯುಂಟು ಮಾಡಿ ಕಸಿವಿಸಿಯಾಯ್ತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
    ಇತ್ತೀಚೆಗೆ ಅಂದರೆ ಕಳೆದ ವಷ೯ ನನ್ನ ನೆರೆಮನೆಯ ಪರಿಚಯದವರೊಬ್ಬರು ತಾನು  ಪದಕ ಮಠಕ್ಕೆ ಹೋಗುವೆನೆಂದು ತಮ್ಮ ಮಗಳು ಪರೀಕ್ಶೆಪ್ರಯುಕ್ತ ಹೋಗಿದ್ದು ಸ್ಕೂಲಿನಿಂದ ಬಂದೊಡನೆ ಮನೆಯ ಬೀಗದ ಕೈಗೊಂಚಲನ್ನು ಅವಳಿಗೆ ತಲುಪಿಸಲು ಹೇಳಿ ಹಾಗೂ ಹಾಲನ್ನು ಕೂಡ ಹಾಕಿಸಿ ಇಟ್ಟಿರಲು ಸೂಚಿಸಿ ಹೊರಟುಹೋದರು.
         ನನಗೆ ತಲೆಗೆ ವಿಚಿತ್ರ ಹುಳು ಹೊಕ್ಕಂತಾಯಿತು.
ಏಕೆಂದರೆ ನಾನು ನನ್ನ ಜೀವಿತಾವಧಿಯಲ್ಲಿ  ಅನೇಕ  ಮಠಗಳ ಹೆಸರನ್ನು ಕೇಳಿದ್ದೆ.
ಶ್ರೀಮದ್ ಉತ್ತರಾದಿಮಠ ವ್ಯಾಸರಾಜಮಠ ರಾಘವೇಂದ್ರ ಸ್ವಾಮಿಗಳ ಮಠ ಉಡುಪಿಯ ಅಷ್ಟಮಠ ಸಿದ್ಧಾರೂಢಮರ ತರಳಬಾಳು ಜಗದ್ಗುರು jss ಪೀಠ  ಮುರುಘರಾಜೇಂದ್ರಮಠ ಹುಬ್ಬಳ್ಳಿ ಮೂರೂವರೆ ಸಾವಿರ ಮಠ ಇತ್ಯಾದಿ ಕೇಳಿದ್ದೆ . ಇದ್ಯಾವುದೋ ಹೊಸಾ ಪದಕ ಮಠ
ಸ್ವಾಮಿಗಳ್ಯಾರೋ  ಹೋಗಿ ದಶಿ೯ಸಿ ತೀಥ೯-ಪ್ರಸಾದ ಸ್ವೀಕರಿಸಿ ಬರಬಹುದಾಗಿತ್ತೇ ಎಂದು ಮನ ತಳಮಳಗೊಂಡಿತು. ಭಾನುವಾರವಾದ್ದರಿಂದ ನಿಧಾನವಾಗಿ ಮಂಪರು ನನ್ನನ್ನಾವರಿಸಿತು.
  ಇದಾದ ಸ್ವಲ್ಪ ಹೊತ್ತಿನಲ್ಲೇ  ನಮ್ಮನೆ ಬಾಗಿಲು ಬಡಿದ ಶಬ್ದ. ಪಕ್ಕದ ಮನೆ ಹುಡುಗಿ ಬಂದು  ಕೀ ಕೇಳಿದಾಗ ಕೊಟ್ಟು ಕಳುಹಿಸಿದೆ.
ನಂತರ  ನಮ್ಮನೆಯವರು ನನಗೆ ದೂರವಾಣಿಕರೆ ಮಾಡಿ ಇಲ್ಲೇ ನ್ಯಾಷನಲ್ ಕಾಲೇಜಿನ ಬಳಿ ಯಾವುದೋ ಕಾಯ೯ಕ್ರಮ ವಡೀತಿದೆ. ಅಯೋಜಕರು ನನ್ನ ಸ್ನೇಹಿತರಾದ್ದರಿಂದ ನನಗೆ ನೆನ್ನೆಯೇ ಆಹ್ವಾನವಿತ್ತು ನಿಮ್ಮನೆಯವರನ್ನೂ ಕರೆದುಕೊಂಡು ಬನ್ನಿ ಎಂದುದ್ದರು.ನಿನಗೆ ತಿಳಿಸಲು ಮರೆತಿದ್ದೆ ರೆಡಿಯಾಗು ಎಂದರು.
ಸರಿ ನಾನು ಸ್ವಲ್ಪ ಖುಷಿಯಿಂದಲೇ ಸಿದ್ದಳಾಗಿ ನಮ್ಮವರನ್ನು ಕಾಯುತ್ತಾ ಕುಳಿತೆ.
ನಂತರ  ಇಬ್ಬರೂ ಹೊರಟೆವು.
  ಮುಂದೆ ವೇದಿಕೆ ಬಳಿ ಬರುತ್ತಿದ್ದಂತೆ ನಮ್ಮ ಪಕ್ಕದ ಮನೆಯಾಕೆನೇ ನಮ್ಮನ್ನು ನಗುನಗುತ್ತಾ ಸ್ವಾಗತಿಸಿದರು.
ಬೆರಗಾದ ನಾನು ನೀವು ಪದಕಮಠಕ್ಕಲ್ಲವೇ ಹೊರಟಿದ್ದು ಎಂದಾಾಗ ಅವರು ಅಲ್ಲೇ ಇದ್ದ ಫಲಕವನ್ನು ತೋರಿ ಅಲ್ಲಿ ನೋಡಿ ಅದನ್ನೇ ನಾನು ಹೇಳಿದ್ಗು ಎಂದಾಗ ನಾನು ಸುಸ್ತೋ ಸುಸ್ತು.
ಏಕೆಂದರೆ ಅದು ಪದ ಕಮ್ಮಟ.
ಕನ್ನಡದ ಬಳಕೆ ಬಗ್ಗೆ ಒಂದು ಕ್ಷಣ ಗಾಬರಿಯಾಗಿದ್ದಂತೂ ನಿಜ.

ಸಾಕಾಗದ ಸಮಯ

ಸಾಲುತಿಲ್ಲವೇ ಸಮಯ  ಸಾಲುತಿಲ್ಲವೇ ಫೇಸ್ಬುಕ್ ಗೆ ಕಾಮೆಂಟು ಪೋಸ್ಟ್ ಮಾಡಲು ಸಾಲುತಿಲ್ಲವೇ
ವಾಟ್ಸಪ್ ಗ್ರೂಪ್ಗೆ ಸ್ಪಂದಿಸಲು ಟೈಮು ಸಾಲುತಿಲ್ಲವೇ
ದಿನಚರಿಯ ಸ್ಟೇಟಸ್ ಗೆ ಹಾಕಲು ಸಾಲುತಿಲ್ಲವೇ
ದಿನದ 24 ಗಂಟೆಯ ಬಿಝಿ ಶೆಡ್ಯೂಲಲಿ
ಹುಚ್ಚು ಬಿಡುತಿಲ್ಲ ಮೊಬೈಲ್ ಬಿಟ್ಟು ಇರಲು ಆಗುತಿಲ್ಲ
ಮೆಸೆಂಜರ್ಗೆ ಆನ್ಸರ್ ಮಾಡಲೂ ಸಮಯ ಸಾಲುತಿಲ್ಲವೇ
ಇನ್ಸ್ಟಾಗ್ರಾಮಲಿ ಫೋಟೋ ಹಾಕಲು ಸಮಯವಿಲ್ಲವೇ
ಟ್ವಿಟರ್ ಖಾತೆಯ ತೆರೆದು ನೋಡಲಾಗಲಿಲ್ಲವೇ
ಯೂ ಟ್ಯೂಬ್ ವಾಚ್ ಮಾಡಲು ಸಮಯ ಸಾಲುತಿಲ್ಲವೇ
ಬಿಟ್ಟೆನೆಂದರೂ ಬಿಡದೀ ಮಾಯೆ
ಕತ೯ವ್ಯ ಜವಾಬ್ದಾರಿ ಮಧ್ಯೆಯೂ ಅನಿವಾಯ೯ದ
ಸ್ನೇಹ ಸಂಕುಲವ ಕಾಪಿಟ್ಟುಕೊಳಬೇಕಾದ ವಿಚಿತ್ರ ಮಾಯೆ
ರೆಸ್ಪಾನ್ಸ್ ಮಾಡದಿದ್ದರೆ
ಯಾರೇನಂದುಕೊಂಡಾರೋ  ಎಂಬ ನಿರಂತರ ಭಯದ ಛಾಯೆ.
ಸಾಲುತಿಲ್ಲವೇ ಸಾಲುತಿಲ್ಲವೇ ಸಮಯ ಸಾಲುತಿಲ್ಲವೇ.

ಸುಧಾಮೂತಿ೯ಯವರ ಯಶಸ್ವಿ ಕಾದಂಬರಿ ಕುರಿತು

ಸ್ನೇಹಿತರೇ ಇತ್ತೀಚೆಗೆ ಡಾ// ಸುಧಾಮೂತಿ೯ಯವರ ಯಶಸ್ವಿ ಎಂಬ ಪುಸ್ತಕ ಓದಿದೆ. ಮೇರು ವ್ಯಕ್ತಿತ್ವದ ಸುಧಾರವರ ಅಂತರಾಳದ ಪರಿಪಕ್ವತೆ , ಪ್ರೌಢಿಮೆ, ಅವರು ಕಂಡುಕೊಂಡಿರುವ ಕಾಣ್ಕೆ ದಶ೯ನ ಇಲ್ಲಿ  ಪಾತ್ರಗಳ ಮೂಲಕ ಅನಾವರಣಗೊಳ್ಳುತ್ತಾ ಹೋಗುತ್ತದೆ.
ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ನ ಕ್ಯಾಂಪಸ್ನಲ್ಲಿ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾಥಿ೯ಗಳಾಗಿ ರಾಜ್ಯದ ವಿವಿಧ ಭಾಗಗಳಿಂದ ವಿವಿಧ ಸಾಮಾಜಿಕ ಸ್ತರಗಳ ವಿಭಿನ್ನ ಕೌಟುಂಬಿಕ ಪರಿಸರದಲ್ಲಿ ಬೆಳೆದ ವಿದ್ಯಾಥಿ೯ಗಳು ಸಂಶೋಧನೆಯ ಉನ್ನತ ಶಿಕ್ಷಣಕ್ಕಾಗಿ ಬಂದಿಲ್ಲಿ ದಾಖಲಾಗಿ ಒಂದೆಡೆ ಸೇರುತ್ತಾರೆ.
  ಆವರೇ ಜಾನಕೀ ಪರಾಂಜಪೆ, ಉತ್ತರ ,ಅರವಿಂದ, ಸುಮಿತ್ರಾ ,ಮಹೇಶ ಹಾಗೂ ಸುಬ್ಬರಾವ್-- ಇವರ ನಡುವೆ ಬಂದು ಹೋಗುವ ಪಾಮಿ, ಸರಳಾ -ಲೇಖಕರೇ ಹೇಳುವಂತೆ ಇವರೆಲ್ಲರ ಬದುಕಿನ ನೋವು-ನಲಿವಿನ , ಆಸೆ-ನಿರಾಸೆಯ ,ಸೋಲು-ಗೆಲುವಿನ , ಯಶಸ್ಸಿನ ಅಪಯಶದ ಕಥೆಯೇ- ಯಶಸ್ವಿ.
         ಪ್ರತಿಷ್ಟಿತ ಕುಟುಂಬದಿಂದ ಬಂದ ಉತ್ತರ ಬದುಕಿನ ಎಲ್ಲ ಪ್ರಶ್ನೆಗಳಿಗೆ ತಾನೇ ಉತ್ತರವಾಗುತ್ತಾಳೆ.
ಅವಳ ಸಹನೆಗೆ ಸಮಸ್ಯೆಗಳೇ ಸೋತು ಕೈ ಚೆಲ್ಲುತ್ತವೆ.
ಜಾನಕಿ ವ್ಯಾಸಂಗದಲ್ಲಿ ಸಂಶೋಧನೆಯಲ್ಲಿ ವೖತ್ತಿ ಬದುಕಿನ ಔನ್ನತ್ಯದ ಹಂತ ತಲುಪಿದರೂ ಸಾಂಸಾರಿಕ ಪರಿಪೂಣ೯ತೆಯನ್ನು ಪಡೆಯಲು ವಿಫಲಳಾಗುತ್ತಾಳೆ. ಜಾನಕಿ ಕೈ ಹಿಡಿದ ಮಹೇಶ ಕವಲುದಾರಿಯಲ್ಲಿ ನಿಲ್ಲುತ್ತಾನೆ.
ಅರವಿಂದ -ಸುಮಿತ್ರ ಎಂದೂ ಸಂಧಿಸಲಾರದ ಎರಡು ಸರಳರೇಖೆಗಳಾಗುತ್ತಾರೆ.
ಅರವಿಂದನ ಗುಡ್ಡಗಾಡು ಜನತೆಯ ಅಭಿವೖದ್ಧಿ ಸೇವೆ  ವ್ಯಥ೯ಪ್ರಯತ್ನವಾಗುತ್ತದೆ. ಈ ದೆಸೆಯಲ್ಲಿ ಪಾಮಿಯ ಸಹಕಾರ ವಿಧಿಯಾಟದಿಂದ ಅಧ೯ಕ್ಕೇ ನಿಲ್ಲುತ್ತದೆ. ನಂತರ ಅಧಿಕಾರದ ಆಸೆಯಿಂದ ಚುನಾವಣೆಯಲ್ಲಿ ನಿಂತು ಸಚಿವನಾಗುತ್ತಾನೆ. ನಂತರ ದೊಡ್ಡ ಹಗರಣವೊಂದರಲ್ಲಿ ಸಿಲುಕಿ ಜೈಲು ಪಾಲಾಗುವ ಸಂದಭ೯ ಬಂದೊದಗುತ್ತದೆ.
        ಶ್ರೀಮಂತ ಮನೆತನದ ಐಷಾರಾಮಿ ಗುಣ ಹೊಂದಿದ ವೀಣನನ್ನು ಮದುವೆಯಾದ ಸುಬ್ಬು ಸಾಂಸಾರಿಕ ಹೊಂದಾಾಣಿಕೆ ಇಲ್ಲದೆ ಆಪ್ತ ಸಹಾಯಕಿ ಸರಳಾ ಸಹವಾಸಕ್ಕೆ ಬಿದ್ದು ಇತ್ತ ಅವಳನ್ನೂ ಮದುವೆಯಾಗದೆ ಒಡೆಯನ ಮನೆತನದ ಆಸ್ತಿ ಆಸೆಗಾಗಿ ವೀಣನೊಡನೆ ಬಾಳಲಾರದೆ ಸರಳಾಗೆ ಮೋಸ ಮಾಡಿದ ಕಾರಣಕ್ಕೆ ಕುಷ್ಠರೋಗಕ್ಕೆ ಬಲಿಯಾಗುತ್ತಾನೆ.
      ಮಹೇಶ ಸಾರಾಳ ಸಹವಾಸಕ್ಕೆ ಬಿದ್ದು  ಜಾನಕಿ ಸಾಧನೆ ಮುಗಿಯುವವರೆಗೆ ಕಾಯದೆ ಮನೆಗೆ ಕಂದನ ಬೆಳಕು ಬರುವಷ್ಟರಲ್ಲಿ  ಜಾನಕಿ ಕೈಗೆ ಸಿಕ್ಕಿಬಿದ್ದು ಶಾಶ್ವತವಾಗಿ ಅವಳಿಂದ ದೂರವಾಗುತ್ತಾನೆ.
ನಿರಾಶೆ ಹತಾಶೆಯ ಜೀವನವನ್ನು ತಳ್ಳುತ್ತಾನೆ.
ಪಾಮಿ ಆಯಸ್ಸು ಅಧ೯ಕ್ಕೇ ಮುಗಿದು ಅರವಿಂದನ ಕನಸು ಸಾಧನೆಗೆ ಮುಳುವಾಗುತ್ತದೆ.
         ಹೀಗೆ ಎಲ್ಲರೂ ಬದುಕಿನ ನೂರೆಂಟು ಏರಿಳಿತಗಳ ಮಧ್ಯೆಯೂ ಅಪಾರ ಸಾಧನೆಗೈದು 20 ವಷ೯ಗಳ ನಂತರ ಒಂದೆಡೆ ಸೇರಿ ಆಗಸ್ಟ್ 1 ರಂದು ತಮ್ಮ  ತಮ್ಮ ಬದುಕಿನ ಪುನರ್  ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಅಷ್ಟರಲ್ಲಿ ಕಾಲ ಬದುಕು ಮಿಂಚಿ ಹೋಗಿರುತ್ತದೆ.
                ಒಟ್ಟಿನಲ್ಲಿ ಮನುಷ್ಯ ಏನೇ ಸಾಧಿಸಿದರೂ ಅವನಿಗೆ ಏನಾದರೊಂದು ಅವ್ಯಕ್ತ ಕೊರಗು ಅತೖಪ್ತ ಭಾವ ಬದುಕಿನುದ್ದಕ್ಕೂ ಕಾಡುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ಒಂದು ಕಳೆದು ಕೊಂಡು ಮತ್ತೊಂದನ್ನು ಪಡೆಯಬೇಕು. ಎಲ್ಲ ವಿಷಯಗಳಲ್ಲೂ ಅಂದರೆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಅಸಾಧ್ಯ ಎನ್ನುವುದು ಕಾದಂಬರಿಯ ತಥ್ಯ.
          ಎಲ್ಲ ಪಾತ್ರಗಳೂ ಕಳೆದುಕೊಂಡಿದ್ದೂ ಗಳಿಸಿಕೊಂಡಿದ್ದೂ ಎರಡೂ ಇದೆ. ಇದೇ ಜೀವನದ ರೀತಿ.
ಲೇಖಕರು ಸೖಷ್ಟಿಸಿದ ಪಾತ್ರ ಉತ್ತರೆಯ ಮಾತಿನಂತೆ ನಿಸಗ೯ ನಿಯಮ ಇದು.ಸದಾಕಾಲ ಜಯವನ್ನೇ ಗಳಿಸಿದವರು ಗವಿ೯ಗಳಾಗುತ್ತಾರೆ.
ಆಗೊಮ್ಮೆ ಈಗೊಮ್ಮೆ ಸೋಲು ಕಂಡವರು ಹೆಚ್ಚು ವಿವೇಕಯುತರಾಗುತ್ತಾರೆ. ಅದಕ್ಕೆ ಜೀವನದಲ್ಲಿ ಇಂದಿನವರೆಗೆ ಯಾರೂ ಪೂತಿ೯ ಗೆದ್ದಿಲ್ಲ. ಪೂತಿ೯ ಸೋತಿಲ್ಲ.
         Life is a Leveller.
ಇದು ಕಾದಂಬರಿಯ ಆಶಯ. ಅಂತೆಯೇ ನನಗನ್ನಿಸಿದ್ದು ನಿರಂತರ ಅನ್ವೇಷಣೆಯೇ  ಕನಸುಗಳು. - ಸಾಕಾರತೆಗೆ ಹೋರಾಟವೇ ಬದುಕು.
          ಕಾದಂಬರಿ  ಸತತ 15  ಮುದ್ರಣಗಳನ್ನು ಕಂಡಿರುವುದು ಪ್ರಾಂಜಲ ಮನಸ್ಸಿನ ಪರಿಪಕ್ವತೆಗೆ ಯಶೋಗಾಥೆಗೆ ಸಾಕ್ಷಿ.  ಖಂಡಿತಾ ಒಮ್ಮೆ ಈ ಪುಸ್ತಕ ಓದಿ ಸ್ನೇಹಿತರೇ, ಬದುಕಿನಲ್ಲಿ ಸ್ಥಿತಪ್ರಜ್ಞತೆಯ ಭಾವ ಮೂಡುವುದರಲ್ಲಿ ಸಂಶಯವಿಲ್ಲ.

ಕರುಣಾಳು ಬಾ ಬೆಳಕೆ

ಸ್ನೇಹಿತರೇ, ಕರುಣಾಳು ಬಾ ಬೆಳಕೆ  ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಎಂದು ನಮ್ಮಲ್ಲಿನ ಮೂಕ   ಆತ೯ನಾದ ಅವ್ಯಕ್ತವಾಗಿ ಕಾಣದ ಅದೖಶ್ಯ ಶಕ್ತಿಯನ್ನು  ಸದಾ  ಬೇಡುತ್ತಿರುತ್ತದೆ. ನಾನು ಇತ್ತೀಚೆಗೆ ಓದಿದ ಡಾ ಗುರುರಾಜ ಕಜ೯ಗಿಯವರ ಕರುಣಾಳು ಬಾ ಬೆಳಕೆ  ಪುಸ್ತಕ ನನ್ನೀ ಮಾತಿಗೆ ಪ್ರೇರಣೆ.
ಪುಸ್ತಕದ  ಕುರಿತು ನನ್ನಲ್ಲಿ ಮೂಡಿದ ಅನಿಸಿಕೆಗಳನ್ನು  ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.
  ಕಥನಕಲೆ ಎನ್ನುವ  ಅಪೂವ೯ ವಿದ್ಯೆ ಎಲ್ಲರಿಗೂ ಸಾಧಿತವಲ್ಲ. ಕೆಲವರು ಮಾತ್ರ ಸಿದ್ದಿಸಿಕೊಂಡಿರುತ್ತಾರೆ. ನಾನು ಅನೇಕ ಕಥಾ ಸಂಕಲನಗಳನ್ನು ಕಥಾ ಮಾಲಿಕೆ ಹಾಗೂ ಗುಚ್ಛಗಳನ್ನು  ಓದಿದ್ದೇನೆ. ಆದರೆ ಎಲ್ಲದರ ವಸ್ತು ವಿಷಯಗಳು ನಮ್ಮನ್ನು ಸವ೯ಕಾಲಕ್ಕೂ ಹಿಡಿದಿಡುವುದು ಹಾಗೂ ಚಿತ್ತದಲ್ಲಿ ಅಚ್ಚೊತ್ತುವುದು ಕಷ್ಟಸಾಧ್ಯವೇ ಸರಿ.
ಕಜ೯ಗಿಯವರು ಕಥೆ ಹೇಳುವ ರೀತಿ ತಾಯಿ ಮಕ್ಕಳನ್ನು  ತಿದ್ದುವ ಪ್ರೀತಿಯೋ , ಗುರುಗಳ ಹಿತನುಡಿಯೋ,  ಕಾಂತಾಸಮ್ಮಿತ ಉಪದೇಶವೋ, ಭಕ್ತನಿಗೆ  ದೇವರ ಆಣತಿಯೋ ನ್ಯಾಯಾಧೀಶನ ಆಜ್ಞೆಯೋ, ಪರಮಾಪ್ತ ಗೆಳೆತನದ  ಸಲಹೆಯೋ,ಪತ್ರಿಕಾ ಸಂಪಾದಕೀಯವೋ  ಹೀಗೆ ಯಾವೊಂದೂ  ಹಾಗೂ ಏನೆಂದೂ ನಿಣ೯ಯಿಸಲಾಗದು. ಅಂತಹ ಅದ್ಭುತ ಆತ್ಮಸಂವಾದ. 
ಫ್ರಜಾವಾಣಿಯ ಅಂಕಣದಲ್ಲಿ ಸದರಿ ಮಾಲಿಕೆ  ಪ್ರಕಟವಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿದೆ.  ಆದರೂ  ಈ  ಕಥಾ ಸಂಕಲನದಲ್ಲಿ ತಾವು  ಶಿಕ್ಷಣ ತಜ್ಞರು  ಹಾಗೂ ಸಾಧಕರು ಎಂತಲೂ ಸಹಸ್ರಾರು ವಿದ್ಯಾಥಿ೯ಗಳಿಗೆ ಮಾಗ೯ದಶ೯ಕರೆಂಬ ಹಮ್ಮು-ಬಿಮ್ಮುಗಳಾಗಲೀ ,  ಒತ್ತಾಯಪೂವ೯ಕ ಆಗ್ರಹವಾಗಲೀ  ಕಟ್ಟುನಿಟ್ಟಿನ ನಿಯಮಗಳಲ್ಲಿ ಕಟ್ಟಿಹಾಕುವ  ಪ್ರಯತ್ನವಾಗಲೀ ಅವರು ಮಾಡಿಲ್ಲ. ಬದಲಾಗಿ ನಮ್ಮ ಹರಿದಾಡುವ ಮನವನ್ನು ಹಿಡಿದಿಡುತ್ತಾರೆ. ಅವರ  ಚಿಂತನೆಯ ವತು೯ಲದ ಸುಳಿಯೊಳಗೆ ನಾವಾಗಿಯೇ ನಮಗರಿವಿಲ್ಲದಂತೆ ಮೌನವಾಗಿ ನಮ್ಮನ್ನು ನಾವು ಕಳೆದುಕೊಂಡು ಲೀನವಾಗಿಬಿಡುತ್ತೇವೆ.
ಸಾಧಿಸಬೇಕೆನ್ನುವವರಿಗೆ ಕಿರುದೀವಿಗೆಯನ್ನು  ಹೊತ್ತಿಸಿಕೊಟ್ಟು ಈ ಕತ್ತಲಿನ ಜಗದಲ್ಲಿ ಬೆಳಕಿನ ಮಿಂಚನ್ನು ಹೇಗೆ ಕಂಡುಕೊಳ್ಳಬಹುದೆಂದು ತಿಳಿಸಿ ಉಪಕರಿಸಿದ್ದಾರೆ. ನಮ್ಮ ಸುತ್ತ-ಮುತ್ತಲಿನ  ಪರಿಸರದಲ್ಲಿ  ಭಾವನಾ ಪ್ರಪಂಚದಲ್ಲಿ  ಯಶಸ್ವೀ ಬಾಳ್ವೆಯನ್ನು  ಹಾಗೂ ಸಾಥ೯ಕ  ಜೀವನವನ್ನು ಹೇಗೆಲ್ಲಾ ನಡೆಸಬಹುದೆಂಬುದನ್ನು  ನೂರಾರು ಸುಂದರ  ನಿದಶ೯ನಗಳು ಹಾಗೂ ಜ್ವಲಂತ  ಸಾಕ್ಷಿಗಳನ್ನು ಒಂದೊಂದಾಗಿ ಅನಾವರಣಗೊಳಿಸುತ್ತಲೇ  ನಮ್ಮನ್ನು ಆತ್ಮಾವಲೋಕನಕ್ಕೆ  ಹಚ್ಚಿಬಿಡುತ್ತಾರೆ. ಎಂಥ ದಾಶ೯ನಿಕನಾದರೂ , ಮಹಾ ಮಾನವತಾವಾದಿಯೂ, ಸವ೯ಸಂಗ ಪರಿತ್ಯಾಗಿಯೂ  ಹೀಗೆ ಯಾರೇ ಆದರೂ ಪರಿಪೂಣ೯ ಪ್ರಜ್ಞಾವಂತರಲ್ಲ /ಸವ೯ಜ್ಞರಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಬದುಕಿನುದ್ದಕ್ಕೂ ಕಲಿಕೆ ನಿರಂತರ . ಇವರು ಹೇಳುವ ಆದಶ೯,  ಮೌಲ್ಯ, ಋಜುತ್ವ , ಜೀವನಶ್ರದ್ಧೆ ಯನ್ನು ಮೂಡಿಸಿ,  ಜೀವನೋತ್ಸಾಹವನ್ನು ನೂಮ೯ಡಿಗೊಳಿಸುವ ಬದುಕನ್ನು ಕಟ್ಟಿಕೊಳ್ಳಲು ಸ್ಫೂತಿ೯ ನೀಡುವ ಬಗೆ  ಅಚ್ಚರಿ ಮೂಡಿಸುತ್ತದೆ.
ನಿಜಕ್ಕೂ ಇದೊಂದು ಅಮೖತದ ಅಕ್ಷಯಪಾತ್ರೆ. ನಮ್ಮಲ್ಲಿನ ದಿವ್ಯ  ಅದಮ್ಯ ಚೇತನವನ್ನು ಜಾಗೖತಗೊಳಿಸಿ ಉದ್ದೀಪನಗೊಳಿಸುವ ಸುಂದರ ಸುದೀಘ೯ ಬೆಳಕಿನ ಯಾತ್ರೆ.
ಅವರು ಉದಾಹರಿಸುವ ಪಾತ್ರಗಳು ನಾವೇ / ನಮ್ಮವೇ/ ನಮ್ಮವರ ಮಧ್ಯದಲ್ಲಿಂದ ಮೂಡಿದವೇ.
       ಮನಸ್ಸೆಂಬ ಮಾಯಾಕನ್ನಡಿಯಲ್ಲಿ  ನಮ್ಮೊಳಗಿನ  ಪ್ರತಿಬಿಂಬವನ್ನು ಹೇಗೆ ನಾವು  ನಿಚ್ಚಳವಾಗಿ ಅರಿವಿನ ಬೆಳಕಿನೊಂದಿಗೆ ಕಾಣಬಹುದು ಎಂಬುದನ್ನು  ಪರಮೋಚ್ಚವಾಗಿ ನಿರೂಪಿಸಿದ್ದಾರೆ. ಪುಸ್ತಕ ಸಿಕ್ಕರೆ ಮರೆಯದೇ ಓದಿ ಮನಸು ಹಗುರಾಗುತ್ತದೆ. ಮೆಲುಕು ಹಾಕುವ ಹೊತ್ತಿಗೆಯದು. ನಿಮ್ಮ ವೈಯಕ್ತಿಕ ಸಂಗ್ರಹದಲ್ಲಿ ಅದರಲ್ಲೂ ನಿಮ್ಮ ಅಂತರಂಗದಲ್ಲೊಂದಿಷ್ಟು ಜಾಗದಲ್ಲಿ ಭದ್ರ ಮಾಡಿಕೊಳ್ಳಿ.
ಇಂತಿ   ಶ್ರೀಮತಿ ಭಾರತಿ ರಘು.

ಒಂದು ಗಳಿಗೆ ನಮಗಾಗಿ

ಆತ್ಮೀಯ ಸ್ನೇಹಿತರೇ ಬದುಕಿನ ಯಾಂತ್ರಿಕತೆಯಲ್ಲಿ ಜಂಜಾಟದ  ಬದುಕಲೇಬೇಕಾದ ಅನಿವಾಯ೯ತೆಯ ನಡುವೆ ಇವುಗಳ ಹೊರತಾಗಿ ಬದುಕು ನೀರಸ ಎನ್ನಿಸುವ ಹೊತ್ತಿನಲ್ಲಿ ಒಂದಷ್ಟು ಘಳಿಗೆ ನಮಗಾಗಿ ಕೇವಲ ನಮ್ಮ ಕುಟುಂಬಕ್ಕಾಗಿ.
              ದಯವಿಟ್ಟು ಹೊರಡಿ ಆಸ್ತಿ ಮಾಡಿಡುವ ಚಿಂತೆ ಕಂತೆಗಳ ತೊರೆದು,   ಧ್ಯಾನ-ಭಜನೆಗಳ ಗುಂಗಿನಿಂದ ಹೊರನಡೆದು,  ಆಪ್ತರು ನೆಂಟರಿಷ್ಟರ ನಿಷ್ಠೂರಗಳ ದಾಟಿ ಬದುಕು ನಮಗಾಗಿ. ಕೇವಲ ನಮ್ಮ ಸಂತಸಕ್ಕಾಗಿ.
           ಹಲವು ಜವಾಬ್ದಾರಿಗಳ ಹೊತ್ತು ಒಂದು ಹಂತ ತಲುಪಿದ  ಬದುಕಿಗೆ ಬೇಡವೇ ರಿಲ್ಯಾಕ್ಸ್?
           ಬದುಕಿನ ವ್ಯಾಪಕತೆ ಸಂಕೀಣ೯ತೆ ವಾಸ್ತವತೆ ಎಲ್ಲವನ್ನೂ ಏಕಕಾಲಕ್ಕೆ ಕಟ್ಟಿಕೊಡುವ  ಪಯಣಕ್ಕೆ/ಪ್ರವಾಸಕ್ಕೆ.
                 ಹೊರಡಿರಿ ರೋಗಗಳು ನಿಮ್ಮನ್ನು ಮುತ್ತುವ ಮುನ್ನ ,  ಕೈಕಾಲಲ್ಲಿ ಅಲ್ಪ-ಸ್ವಲ್ಪ ಕಸುವು ಇರುವ ಕಾಲದಲ್ಲೇ, at least  ಮೖತ್ಯು ಮುಟ್ಟದ ಮುನ್ನ.  I beg  u all.  This is my humble  request.   Once again Thank u all.

ಜೀವನ ಸಂಧ್ಯೆ ಮರಳಿ ಅರಳುವ ಸಮಯ.

ಜೀವನ ಸಂಧ್ಯೆಯ ಪ್ರವೇಶ ನೇಪಥ್ಯಕೆ ಸಾಗುವ  ದಿನನಿತ್ಯಕೆ ಬೆನ್ನು ಹಾಕಿ  ಹಾರುವ ಪಲಾಯನವಲ್ಲ.
    ಅದು  ನವ ಜೀವನದ ಮರುಹುಟ್ಟು.  ಕಳೆದು ಹೋದ ಬಾಳ ನೋವು-ನಲಿವಿನ ಸುಖ-ದುಖಗಳ ಪುನ: ಆವಿಭ೯ವಿಸಿಕೊಂಡು  ಸೋತು ಗೆದ್ದ ಜೀವನದ ಸಿಂಹಾವಲೋಕನ ಆತ್ಮಾವಲೋಕನ  ಮಾಡುತ್ತಾ ಸ್ವತ: ಅಳೆದು ತೂಗಿಕೊಳ್ಳುವ ಸಮಯ.
    ಜೀವನಶ್ರದ್ಧೆ ಮತ್ತು ಜೀವನೋತ್ಸಾಹಗಳನ್ನು ಮತ್ತೊಮ್ಮೆ ಮಗದೊಮ್ಮೆ ಮೈಗೂಡಿಸಿಕೊಳ್ಳುವ  ನವ ರಮ್ಯಚೈತ್ರಕಾಲ .
           ಏಕೆಂದರೆ ಜೀವನ ಒಂದು ಹಂತಕ್ಕೆ ಬಂದಿರುತ್ತದೆ. ವೈಯುಕ್ತಿಕ ಜವಾಬ್ದಾರಿಗಳು ಮೇರುಹಂತಕ್ಕೆ ಬಂದು ಮಕ್ಕಳು ನೆಲೆಯಾಗಿ ಬಾಳ ಹಾದಿ  ಹಾಗೂ ಭವಿತವ್ಯವನ್ನು ಕಟ್ಟಿಕೊಳ್ಳಲು ಹಾತೊರೆಯುತ್ತಿರುತ್ತಾರೆ. ಇಂಥ ಸಮಯದಲ್ಲಿ ಅವರರ ಬೆನ್ನಿಗೆ ನಿಂತು ನೈತಿಕ ಮಾನಸಿಕ ಸ್ಥೈಯ೯ ಹೇಳುತ್ತಾ ಬಾಳನ್ನು ಹಸನುಗೊಳಿಸಿಕೊಳ್ಳಲು ನಯವಾಗಿಯೇ ತಿಳಿಹೇಳುತ್ತಾ  ಅವರ ವೈಯುಕ್ತಿಕತೆಗೆ ಅಂಟಿಯೂ ಅಂಟದಂತಿರಬೇಕು.
          ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ ಎಂದು ಹಿಮಾಲಯಕ್ಕೋ ಚಾರಾಧಾಮ್ ಯಾತ್ರೆಗೋ ಕಾಣದ ದಿಗಂತಕ್ಕೋ ದೖಷ್ಟಿ ನೆಡುವುದು ತರವಲ್ಲ.  ದೇವರು ಕೊಟ್ಟ ಜೀವನ ಬದುಕಿ ಸವೆಸಿ ಸಾಥ೯ಕ ಪಡಿಸಿಕೊಳ್ಳಬೇಕು.

ಭಾಷೆ ಗೊಂದಲ ಬೇಡ

ಭಾಷೆ ಯಾವುದೇ ಆಗಲಿ ಸ್ಥಾನಮಾನಕ್ಕಿಂತ ಮಾನವನ ಸಹ ಬಾಳ್ವೆಗೆ ಕ್ಕೊಳ್ಕೊಡುಗೆಗೆ  ಸಾಂಸ್ಕೖತಿಕ ವಿನಿಮಯಕ್ಕೆ ಪರಸ್ಪರ ಸೋದರತ್ವ ಹಾಗೂ ಭಾವೈಕ್ಯತೆಗೆ ಭಾಷೆ ಸಂವಹನ ಮಾಧ್ಯಮವಾಗಬೇಕು. ಅದಾಗಲೇ ಅದು ಪರಿಣಾಮಕಾರಿ.

ಉಡುಗೊರೆ

*ಉಡುಗೊರೆ*💐
**********
ತುಂಬಾ ಬಡತನದಲ್ಲಿ ಬೆಳೆದ ಒಬ್ಬ ಆರ್ಡಿನರಿ ಅಂಚೆ ಕಚೇರಿಯ ಉದ್ಯೋಗಿ ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ ಉದ್ಯೋಗಸ್ಥರನ್ನಾಗಿ ಮಾಡಿ ವಿದೇಶಗಳಲ್ಲಿ ವಾಸ್ತವ್ಯ ಹೂಡುವ ಹಾಗೇ ಮಾಡಿದ.

ಇಬ್ಬರು ಮಕ್ಕಳಿಗೆ ಮದುವೆಯಾಗಿ ಮಕ್ಕಳಾದವು .ಇಬ್ಬರೂ ಸುಖೀ ಸಂಸಾರಸ್ಥರೇ ಆದರೆ ತಂದೆಗೆ ಊರಿಂದೂರಿಗೆ ವರ್ಗಾವಣೆಗಳಾಗುತ್ತಾ ಕೊನೆಗೆ ಆಂದ್ರಪ್ರದೇಶದ ಚಿಂತಲಪಲ್ಲಿ ಎಂಬ ಕಚೇರಿಯಲ್ಲಿ ನಿವೃತ್ತಿ ಸ್ಥಾನಕ್ಕೆ ಬಂದು ನಿಂತರು.
ನಿವೃತ್ತಿಯು ಆಯಿತು, ಈಗ ಅಪ್ಪನಿಗೆ ಚಿಂತೆ.

ಮಕ್ಕಳಿಗೆ ಫೋನಾಯಿಸುತ್ತಾರೆ "ಒಂದೆರಡು ದಿನ ಊರಿಗೆ ಬಂದುಹೋಗಲು ಸಾಧ್ಯವೇ" ಎಂದು.

ಮಕ್ಕಳು ಸಹ ಒಪ್ಪುತ್ತಾರೆ .ಆದರೆ ಮಕ್ಕಳು ಒಂದೆರಡು ದಿನವಲ್ಲದೆ ಒಂದು ತಿಂಗಳು ರಜೆ ಮಾಡಿ ಊರಿಗೆ ಬರುತ್ತಾರೆ.

ಬಂದ ಮಕ್ಕಳಿಗೆ ತಂದೆ ಹೇಳುತ್ತಾರೆ "ನಿಮಗೊಂದು ವಿಷಯ ತಿಳಿಸಬೇಕಿದೆ "ಎಂದು.

"ನನ್ನ ನಿವೃತ್ತಿಯಾಗಿದೆ ಹಾಗೆಯೇ ನನ್ನ ಖಾತೆಗೆ ಒಂದಷ್ಟು ಲಕ್ಷ ಪಿ ಎಫ್ ಹಣವು ಬಂದಿದೆ ನೀವಿಬ್ಬರು ಆ ಹಣವನ್ನು ಹಂಚಿಕೊಂಡರೆ ನಾನು ನನ್ನ ಪೆನ್ಶನ್  ಹಣದಲ್ಲಿ ನಿಮ್ಮ ತಾಯಿಯನ್ನು ಸಾಕಬಲ್ಲೆ ಈ ಸುದ್ದಿ ಹೇಳಲಿಕ್ಕೆಂದೇ ನಿಮ್ಮನ್ನು ಕರೆಸಿದೆ ಎಂದು ಮತ್ತೆ ಒಂದೆರಡು ದಿನ ಒಟ್ಟಿಗೆ ಎಲ್ಲರೂ ಎಲ್ಲಾದರೂ ಸುತ್ತಿ ಬರೋಣವೆಂದು" ಇಚ್ಛೆ ವ್ಯಕ್ತಪಡಿಸುತ್ತಾರೆ

ಅದಕ್ಕೆ ಮಕ್ಕಳು ಹೇಳುತ್ತಾರೆ
"ಮೊದಲು ಸಲ ಕೆಲಸ ಮಾಡಿದ ಅಂಚೆ ಕಚೇರಿಯಾದ ಉಡುಪಿಯ ಹಿತ್ತಲುಮನೆ ಎಂಬ ಗ್ರಾಮಕ್ಕೆ ಹೋಗಿ ಬರೋಣ"ಎಂದು ಹೇಳುತ್ತಾರೆ,

ತಂದೆಗೆ ಆಶ್ಚರ್ಯ ಆ ಗ್ರಾಮದ್ಲಲೇನಿದೆ ಎಂದು ಆದರೂ ಮಕ್ಕಳಿಗೆ ನಿರಾಸೆಗೊಳಿಸದೆ ಹೊರಟುನಿಲ್ಲುತ್ತಾರೆ.

ಆ ಗ್ರಾಮದಲ್ಲಿ ಮೊದಲು ಕೆಲಸ ಮಾಡುವ ಸಮಯದಲ್ಲಿ ವಾಸ್ತವ್ಯ ಹೂಡಿದ್ದ ಗುಡಿಸಲು ಚೊಕ್ಕವಾದ ಮನೆ. ತನ್ನ ಮಕ್ಕಳು ಆಟವಾಡಿದ್ದ ಅಂಗಳ ಹಸಿರುಮಯವಾಗಿದೆ ಆಗ ನೆಟ್ಟ ಸಸಿಗಳು ಮರಗಳಾಗಿವೆ ತೆಂಗಿನ ಮರ ತುಂಬಾ ಕಾಯಿಗಳಿವೆ ಎತ್ತ ನೋಡಿದರು ಹಸಿರು ಮನೆಯ ಕಂಪೌಂಡಿನ ಒಳಗೆ ಪರಿಶುದ್ಧ ತುಳಸಿ ಗಿಡ ಗೇಟು ಪ್ರವೇಶಿಸುವಷ್ಟರಲ್ಲಿ ಒಬ್ಬ ಆಳು ಬಂದು ಗೇಟಿನ ಬೀಗದ ಕೀಲಿ
ಮಗನ ಕೈ ಗೆ ಇಡುತ್ತಾನೆ ಮಗ ಬೀಗ ತೆಗೆದು ಒಳ ಬಂದಾಗ ತಂದೆಗೆ ಎಲ್ಲವೂ ಅಯೋಮಯ ಈ ಆಳು ಯಾರು, ಈ ಮನೆಗೆ ಏಕೆ ಬಂದೆವು,  ಎಲ್ಲವೂ ನಿಗೂಢವೇ...

ಮನೆಯ ಒಳಗೆ ಬರುವಷ್ಟರಲ್ಲಿ ಎಲ್ಲವೂ ಸ್ವಚ್ಛಂದ ಸ್ವಚ್ಛಂದ...

ತಂದೆ ಏನೋ ಕೇಳಲು ಬರುವಷ್ಟರಲ್ಲಿ ಮಕ್ಕಳೇ ಮಾತನಾಡಲು ಶುರು ಮಾಡುತ್ತಾರೆ "ಅಪ್ಪ.... ನಿಮ್ಮ ನಿವೃತ್ತಿ ಹತ್ತಿರವಿದೆಯೆಂದು ತಿಳಿಯಿತು .ಈ ಸ್ಥಳ ನಿಮಗೆ ತುಂಬಾ ಇಷ್ಟವೆಂದು ಒಂದು ವರ್ಷದ ಹಿಂದೆ ಈ ಸ್ಥಳವನ್ನು ನಾವೇ ಕೊಂಡುಕೊಂಡಿದ್ದೇವೆ ವರ್ಗಾವಣೆಗಳಿಂದ ಬಸವಳಿದಿದ್ದೀರಿ ಸಾಕು ನಿಮ್ಮ ನೆಮ್ಮದಿಗೆ ಒಂದು ಮನೆ ಇರಬೇಕು ಎಂದು ನಿಮಗೆ ತಿಳಿಸದೆ ನಾವಿಬ್ಬರು ಬಂದು ಇಲ್ಲಿ ಎಲ್ಲವೂ ಸರಿಪಡಿಸಿ ಹೋದೆವು ನಿಮ್ಮ
ಪಿ ಎಫ್ ಹಣ ಖಾತೆಯಲ್ಲೇ ಇರಲಿ ನಮ್ಮನ್ನು ಬಡತನದಲ್ಲಿ ಓದಿಸಿದಿರಿ ,ಬೆಳೆಸಿದಿರಿ ನಾವು ಈಗ ಸದೃಢರಾಗಿದ್ದೇವೆ .ನಮ್ಮ ಮಕ್ಕಳನ್ನು ನಿಮ್ಮಲ್ಲಿಯೇ ಬಿಟ್ಟು ಹೋಗುತ್ತೇವೆ. ಅವರು ನಿಮ್ಮ ಅಡಿಯಲ್ಲಿ ಬೆಳೆದರೆ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಅವರಿಗೂ ತಿಳಿಯುತ್ತದೆ.
ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ .ಮೊಮ್ಮಕ್ಕಳನ್ನು ಓದಿಸಿ ಕೆಲಸಕ್ಕೆಂದು ಆಳು ಇದ್ದಾನೆ ಪ್ರತಿ ತಿಂಗಳು ಅವನ ಸಂಬಳವನ್ನು ಅವನ ಖಾತೆಗೆ ತುಂಬುತ್ತೇವೆ .ನಮ್ಮ ಮನೆಯ ಪಕ್ಕದಲ್ಲೇ ಅವನಿಗೂ ವಾಸ್ತವ್ಯವಿದೆ ವರ್ಷಕ್ಕೊಮ್ಮೆ ತಪ್ಪದೆ ಬಂದುಹೋಗುತ್ತೇವೆ. ಎಂದು ಹೇಳುವಷ್ಟರಲ್ಲಿ
ಅಪ್ಪನ ಕಣ್ಣಾಲಿಗಳು ತುಂಬಿ, ಮೂಕಪ್ರೇಕ್ಷಕರಾಗಿ
ಬಿಟ್ಟರು

*ಮಕ್ಕಳೆಂದರೆ....*☝🏻.

ಕನ್ನಡ ಸಂಪದದ ಬಗ್ಗೆ ನಾಲ್ಕು ಮಾತು

ಕನ್ನಡ ಸಂಪದ  ಅಂಕಣ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂವೇದನೆ ಸೖಜನಶೀಲ ವ್ಯಕ್ತಿತ್ವ ಹಾಗೂ ಕ್ರಿಯಾತ್ಮಕ ಮನೋಭಾವ ಹಾಗೂ ಶೀಘ್ರ ಸಂವಹನ - ಸಹಸ್ಪಂದನಕ್ಕಾಗಿ ಒಡಮೂಡಿರುವ ಶ್ರೀ ತಿರು ಶ್ರೀಧರ್ ರವರ ಪ್ರಾಮಾಣಿಕ ಪ್ರಯತ್ನದ ಫಲಶೖತಿ.
           ಕಲೆ  ಸಾಹಿತ್ಯ ಸಂಗೀತ ಸಂಸ್ಕ್ಕೖತಿ ರಂಗಭೂಮು ನಾಟಕ ಚಲನಚಿತ್ರ  ನಾಡಿಗೆ ಅವಿರತ ಸೇವೆ ಸಲ್ಲಿಸಿದ ಅವಿಸ್ಮರಣೀಯರನ್ನು ಹಾಗೂ ಕೆಲವೊಮ್ಮೆ ಪ್ರಾತ:ಸ್ಮರಣೀಯರನ್ನು ಗ್ರಾಂಥಿಕ ರೂಪದಲ್ಲಿ ಅಡಗಿ ಹುದುಗಿಹೋದ ಮಹನೀಯರನ್ನು ಸಮಾಜದ ಮುಖ್ಯಭೂಮಿಕೆಗೆ ಈಗಿನ ಜಾಗತೀಕರಣದ ತಾಂತ್ರಿಕ / ಯಾಂತ್ರಿಕ ಜಗತ್ತಿಗೆ ಅಡಿಯಾಳಾದ ಮನಸಿನ ಸ್ಮೖತಿಪಟಲದಲ್ಲಿ ಮತ್ತೆ ತರುವ  ಸ್ಮರಣಿಕೆ ಹಾಗೂ ಜ್ಞಾಪಿಸಿಕೊಳ್ಳುವ ಧೀಮಂತ ಪ್ರಯತ್ನ.
               ಇಂದು ದುಡ್ಡಿನ ಹಿಂದೆ ನಾಗಾಲೋಟದಲ್ಲಿರುವ ಯಾರಿಗೂ ಭವ್ಯ ಇತಿಹಾಸವನ್ನು ಕೆದಕಿ ಬೆದಕಿ ನೋಡುವ  ಪಾರಂಪರಿಕ  ಚರಿತ್ರೆಯನ್ನು ಸಿಂಹಾವಲೋಕನ ಮಾಡುವ  ಪ್ರಬುಧ್ಧತೆಯಾಗಲೀ  ಮನಸ್ಥಿತಿಯಾಗಲೀ ಇಲ್ಲ. ಇಂತಹ ಸಂದಭ೯ದಲ್ಲಿ ಅಂತಹವರ ಕೈಯಲ್ಲೇ ಇರುವ ಸುಲಭ ಸಾಧನವಾದ ಸಂಚಾರೀ ದೂರವಾಣಿಯೆಂಬ ಮಾಯಾಯಂತ್ರದಲ್ಲಿ ಕೆಲ ಕ್ಷಣಗಳಾದರೂ ಅವನ ಮನಸ್ಸನ್ನು ಹಿಡಿದಿಡುವ ಅದ್ಭುತ  ಕೆಲಸ ರೋಬೋಟ್ ರೀತಿಯಲ್ಲಿಯೇ  ಸೆಳೆಯುವ ಮಾಯಾಜಾಲ ಕನ್ನಡ ಸಂಪದದ್ದು. ಅರಿಯುವ ಮನಸ್ಸು ಸ್ಪಂದಿಸುವ ವೇಳೆ ನಮಗಿದ್ದರೆ ಸಾಕು. ಅದು ಸಮಗ್ರ ಮಾಹಿತಿ ಕಣಜ. ಅರಿವಿನ ವಿಸ್ತಾರದ ಹೊಸಲೋಕವನ್ನೇ ನಮ್ಮುಂದೆ ತೆರೆದಿಡುತ್ತಿದೆ ಕನ್ನಡ ಸಂಪದ. ಬಳಸಿಕೊಳ್ಳುವ ಜಾಣ್ಮೆ ನಮ್ಮಲ್ಲಿದ್ದರೆ ಸಾಕು.