ಸ್ನೇಹಿತರೇ ಕನ್ನಡ ಭಾಷೆಯ ಆಡುಮಾತಿನ ಬಳಕೆ ಕೆಲವರಿಂದ ಎಷ್ಟು ಆಭಾಸವನ್ನುಉಂಟು ಮಾಡುತ್ತದೆ ಎಂದರೆ ಇತ್ತೀಚಿನ ಘಟನೆಯೊಂದು ನನಗೆ ಘಾಸಿಯುಂಟು ಮಾಡಿ ಕಸಿವಿಸಿಯಾಯ್ತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಇತ್ತೀಚೆಗೆ ಅಂದರೆ ಕಳೆದ ವಷ೯ ನನ್ನ ನೆರೆಮನೆಯ ಪರಿಚಯದವರೊಬ್ಬರು ತಾನು ಪದಕ ಮಠಕ್ಕೆ ಹೋಗುವೆನೆಂದು ತಮ್ಮ ಮಗಳು ಪರೀಕ್ಶೆಪ್ರಯುಕ್ತ ಹೋಗಿದ್ದು ಸ್ಕೂಲಿನಿಂದ ಬಂದೊಡನೆ ಮನೆಯ ಬೀಗದ ಕೈಗೊಂಚಲನ್ನು ಅವಳಿಗೆ ತಲುಪಿಸಲು ಹೇಳಿ ಹಾಗೂ ಹಾಲನ್ನು ಕೂಡ ಹಾಕಿಸಿ ಇಟ್ಟಿರಲು ಸೂಚಿಸಿ ಹೊರಟುಹೋದರು.
ನನಗೆ ತಲೆಗೆ ವಿಚಿತ್ರ ಹುಳು ಹೊಕ್ಕಂತಾಯಿತು.
ಏಕೆಂದರೆ ನಾನು ನನ್ನ ಜೀವಿತಾವಧಿಯಲ್ಲಿ ಅನೇಕ ಮಠಗಳ ಹೆಸರನ್ನು ಕೇಳಿದ್ದೆ.
ಶ್ರೀಮದ್ ಉತ್ತರಾದಿಮಠ ವ್ಯಾಸರಾಜಮಠ ರಾಘವೇಂದ್ರ ಸ್ವಾಮಿಗಳ ಮಠ ಉಡುಪಿಯ ಅಷ್ಟಮಠ ಸಿದ್ಧಾರೂಢಮರ ತರಳಬಾಳು ಜಗದ್ಗುರು jss ಪೀಠ ಮುರುಘರಾಜೇಂದ್ರಮಠ ಹುಬ್ಬಳ್ಳಿ ಮೂರೂವರೆ ಸಾವಿರ ಮಠ ಇತ್ಯಾದಿ ಕೇಳಿದ್ದೆ . ಇದ್ಯಾವುದೋ ಹೊಸಾ ಪದಕ ಮಠ
ಸ್ವಾಮಿಗಳ್ಯಾರೋ ಹೋಗಿ ದಶಿ೯ಸಿ ತೀಥ೯-ಪ್ರಸಾದ ಸ್ವೀಕರಿಸಿ ಬರಬಹುದಾಗಿತ್ತೇ ಎಂದು ಮನ ತಳಮಳಗೊಂಡಿತು. ಭಾನುವಾರವಾದ್ದರಿಂದ ನಿಧಾನವಾಗಿ ಮಂಪರು ನನ್ನನ್ನಾವರಿಸಿತು.
ಇದಾದ ಸ್ವಲ್ಪ ಹೊತ್ತಿನಲ್ಲೇ ನಮ್ಮನೆ ಬಾಗಿಲು ಬಡಿದ ಶಬ್ದ. ಪಕ್ಕದ ಮನೆ ಹುಡುಗಿ ಬಂದು ಕೀ ಕೇಳಿದಾಗ ಕೊಟ್ಟು ಕಳುಹಿಸಿದೆ.
ನಂತರ ನಮ್ಮನೆಯವರು ನನಗೆ ದೂರವಾಣಿಕರೆ ಮಾಡಿ ಇಲ್ಲೇ ನ್ಯಾಷನಲ್ ಕಾಲೇಜಿನ ಬಳಿ ಯಾವುದೋ ಕಾಯ೯ಕ್ರಮ ವಡೀತಿದೆ. ಅಯೋಜಕರು ನನ್ನ ಸ್ನೇಹಿತರಾದ್ದರಿಂದ ನನಗೆ ನೆನ್ನೆಯೇ ಆಹ್ವಾನವಿತ್ತು ನಿಮ್ಮನೆಯವರನ್ನೂ ಕರೆದುಕೊಂಡು ಬನ್ನಿ ಎಂದುದ್ದರು.ನಿನಗೆ ತಿಳಿಸಲು ಮರೆತಿದ್ದೆ ರೆಡಿಯಾಗು ಎಂದರು.
ಸರಿ ನಾನು ಸ್ವಲ್ಪ ಖುಷಿಯಿಂದಲೇ ಸಿದ್ದಳಾಗಿ ನಮ್ಮವರನ್ನು ಕಾಯುತ್ತಾ ಕುಳಿತೆ.
ನಂತರ ಇಬ್ಬರೂ ಹೊರಟೆವು.
ಮುಂದೆ ವೇದಿಕೆ ಬಳಿ ಬರುತ್ತಿದ್ದಂತೆ ನಮ್ಮ ಪಕ್ಕದ ಮನೆಯಾಕೆನೇ ನಮ್ಮನ್ನು ನಗುನಗುತ್ತಾ ಸ್ವಾಗತಿಸಿದರು.
ಬೆರಗಾದ ನಾನು ನೀವು ಪದಕಮಠಕ್ಕಲ್ಲವೇ ಹೊರಟಿದ್ದು ಎಂದಾಾಗ ಅವರು ಅಲ್ಲೇ ಇದ್ದ ಫಲಕವನ್ನು ತೋರಿ ಅಲ್ಲಿ ನೋಡಿ ಅದನ್ನೇ ನಾನು ಹೇಳಿದ್ಗು ಎಂದಾಗ ನಾನು ಸುಸ್ತೋ ಸುಸ್ತು.
ಏಕೆಂದರೆ ಅದು ಪದ ಕಮ್ಮಟ.
ಕನ್ನಡದ ಬಳಕೆ ಬಗ್ಗೆ ಒಂದು ಕ್ಷಣ ಗಾಬರಿಯಾಗಿದ್ದಂತೂ ನಿಜ.
Sunday, 22 September 2019
ಆಡುಭಾಷೆಯ ಕಸಿವಿಸಿ
Subscribe to:
Post Comments (Atom)
ಹ ಹ ಸುಂದರ ಬರಹ
ReplyDelete