Monday, 20 November 2017

ಹುಚ್ಚು ಕೋಡಿ ಮನಸು

ಮನವೇ ಮಂದಿರ ನಾದ ದೇಗುಲ ಎಂದರು ಹಿರಿಯರು. ಮನ ಮಾನಸವೆಂಬುದು ನಿಜಕ್ಕೂ  ಸರೋವರ. ಇಲ್ಲಿ ಎಗ್ಗುಸಿಗ್ಗಿಲ್ಲದೆ ಹರಿಯುವ ಭಾವಗಳು ಅನಂತ. ಮನಸನ್ನು ಎತ್ತೆತ್ತಲೋ ಹರಿಯಲು ಬಿಡಬಾರದೆಂದರು. ಬಿಗಿಹಿಡಿಯಬೇಕೆಂದರು. ಮನದ ಭಾವಗಳಲ್ಲಿ ಒಡಮೂಡುವ ನಾನಾಭಾವಗಳನ್ನು ಮಾತುಗಳಲ್ಲಿ ಹಿಡಿದಿಡುವುದು ಕಷ್ಟ. ಭಾವನೆಗಳ ಮಹಾಪೂರವನ್ನು ಅನಾವರಣ ಮಾಡುವುದೂ ಕಷ್ಟ. ಮನದ  ಮಾತುಗಳಿಗೆ ಸೂಕ್ತ ವೇದಿಕೆ ಎನಿಸಿದ್ದು   ನನ್ನದೇ ಬ್ಲಾಗ್ ಅನಿಸಿತು. ಹಾಗಾಗಿ ಹಂಚಿಕೊಳ್ಳುತ್ತಿದ್ದೇನೆ.

No comments:

Post a Comment